1982 ರಲ್ಲಿ ದೇವಸ್ಥಾನದ ಪುನರ್ನವೀಕರಣದ ಕಾರ್ಯವನ್ನು ಕೈಗೆತ್ತಿಕೊಂಡು, ಅಲ್ಲಿ ಸುಮಾರು 190 ವರ್ಷಗಳಿಂದ ನಿಂತಿದ್ದ ಧ್ವಜಸ್ತಂಭದ ಬಂಗಾರದ ಹೊರಕವಚವನ್ನೂ ಪಾಲಿಶ್ ಮಾಡಿಸಬೇಕೆಂದು ನಿರ್ಧರಿಸಿ ಅದರ ಕೆಳಭಾಗದ ಪ್ಲೇಟ್ ಗಳನ್ನು ತೆಗೆದಾಗ ಒಳಗಿನ ಟೀಕ್ ಮರ ಜೀರ್ಣ ಶೀರ್ಣವಾಗಿದ್ದು ಕಂಡುಬಂತು. ನೆಲದಲ್ಲಿ ಹುದುಗಿದ್ದ ಸ್ತಂಭದ ಭಾಗ ವಸ್ತುತಃ ಇರಲೇ ಇಲ್ಲ. ಬಂಗಾರದ ಕವಚದ ಆಧಾರದ ಮೇಲೆಯೇ ಆ ಸ್ತಂಭ ಇಷ್ಟು ಕಾಲ ನಿಂತಿದ್ದು ನೋಡಿ ಆಡಳಿತವರ್ಗದವರಿಗೆ ಆಘಾತ ವಾಯಿತು. ಈಗ ಪೂರ್ತಿ ಹೊಸ ಸ್ತಂಭ ವನ್ನೇ ಹಾಕುವುದು ಅನಿವಾರ್ಯ ವಾಯಿತು.
ಅಲ್ಲಿನ ಆಗಮಶಾಸ್ತ್ರದ ಪ್ರಕಾರ ಧ್ವಜಸ್ತಂಭಕ್ಕೆ ಕಟ್ಟುನಿಟ್ಟಾದ ನಿಯಮಗಳಿವೆ. ಆ ತರಹದ ಮರದ ಕಂಬಕ್ಕಾಗಿ ಶೋಧನೆ ಶುರುವಾಯಿತು. ಅದರ ವಿವರಗಳನ್ನು ರೇಡಿಯೋದಲ್ಲೂ, ಪತ್ರಿಕೆ ಗಳಲ್ಲೂ ಪ್ರಚಾರ ಮಾಡಿದರು. ಕೊನೆಗೆ ಬೆಂಗಳೂರಿನ ಭಕ್ತರೊಬ್ಬರು ಕರ್ನಾಟಕದ ದಾಂಡೇಲಿಯ ಅರಣ್ಯದಲ್ಲಿ ಅಂತಹ ಹಳೆಯ ತೇಗದ ಮರಗಳಿರುವುದಾಗಿಯೂ, ಅಪ್ಪಣೆ ಕೊಟ್ಟರೆ ಸ್ವಾಮಿ ಸೇವೆಯೆಂದು ಅದನ್ನು ಕೊಡಿಸುವ ವ್ಯವಸ್ಥೆ ಮಾಡುವುದಾಗಿಯೂ ಹೇಳಿ ಮುಂದೆ ಬಂದರು. ಅದಕ್ಕೆ ಆಗಿನ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ದಿ.ಗುಂಡೂರಾವ್ ಅವರೂ ಬೇಕಾದ ಸಹಾಯ ಮಾಡಲು ಮುಂದೆ ಬಂದರು.
ತಜ್ಞರ ತಂಡ ಅಲ್ಲಿಗೆ ಹೋಗಿ ಮುನ್ನೂರು ವರ್ಷ ವಯಸ್ಸಿನ , 75 ಅಡಿ ಎತ್ತರದ 6 ಮರಗಳನ್ನು ಆಯ್ಕೆ ಮಾಡಿತು. ಅವುಗಳನ್ನು ಇಡೀದಿಮ್ಮಿಯಾಗಿ ಆ ದಟ್ಟ ಕಾಡಿನಿಂದ ಹೊರಗೆ ತರುವುದು ಭಾರೀ ಸಮಸ್ಯೆ ಆಯಿತು. ತಾತ್ಕಾಲಿಕ ರಸ್ತೆ ನಿರ್ಮಿಸುವ ಜವಾಬ್ದಾರಿಯನ್ನು ಆಗಿನ ಚೀಫ಼್ ಕನ್ಸರ್ವೇಟರ್ ಆಫ಼್ ಫಾ಼ರೆಸ್ಟ್ಸ್ ವಹಿಸಿಕೊಂಡು ನಿರ್ಮಿಸಿ ಕೊಟ್ಟರು. ಆ ದಿಮ್ಮಿಗಳನ್ನು ಕಾಡಿನ ಅಂಚಿನವರೆಗೆ ತರಲು ತಕ್ಕ ಕ್ರೇನ್ ವ್ಯವಸ್ಥೆ ಯನ್ನು ಅಲ್ಲಿನ ಸೋಮಾನಿ ಪೇಪರ್ ಮಿಲ್ಸ್ ನವರು ವ್ಯವಸ್ಥೆ ಮಾಡಿದರು.
ಕಾಡಿನ ಅಂಚಿಗೆ ಬಂದವು ಆರೂ ದಿಮ್ಮಿಗಳು. ಅಲ್ಲಿಂದ ತಿರುಪತಿ ಗೆ ಒಯ್ಯಲು 16 ಚಕ್ರಗಳ ಟ್ರೈಲರ್ ಲಾರಿ ಬಂದಿತ್ತು. 430 ಕಿಲೋಮೀಟರ್ ದೂರ ತಿರುಪತಿ ಬೆಟ್ಟದ ಬುಡಕ್ಕೆ. ಬಾಡಿಗೆ 70 ಸಾವಿರ ಎಂದು ನಿಗದಿ ಮಾಡಿತ್ತು. ಡ್ರೈವರ್ ಎಲ್ಲವನ್ನೂ ಒಂದುಸಲ ಪರಿಶೀಲಿಸಿ, ಆಕಾಶದ ಕಡೆಗೊಮ್ಮೆ ಕೈಮುಗಿದು ‘ಗೋವಿಂದಾ, ಗೋವಿಂದ’ ಎಂದು ಜೋರಾಗಿ ಕೂಗಿ ಲಾರಿ ಹತ್ತಿದ. ನೆರೆದವರೆಲ್ಲರ ‘ಗೋವಿಂದಾ, ಗೋವಿಂದ’ ಕೂಗುಗಳೊಂದಿಗೆ ಲಾರಿ ಹೊರಟಿತು.
ಮರುದಿನ ಸಂಜೆಯ ಹೊತ್ತಿಗೆ ಬೆಟ್ಟದ ಕೆಳಗಿನ ಅಲಿಪಿರಿ ತಲುಪಿತು. ಯಾವುದೇ ವಿಘ್ನಗಳು ಸಂಭವಿಸಲಿಲ್ಲ. ಲಾರಿಯನ್ನು ಕಂಡೊಡನೆ ಸ್ವಾಗತಕ್ಕೆ ಸಿದ್ಧವಾಗಿ ನೆರೆದಿದ್ದ ಜನಸ್ತೋಮ ಜೈಕಾರ ಮಾಡುತ್ತಾ ‘ಗೋವಿಂದಾ, ಗೋವಿಂದ’ ಕೂಗುತ್ತಾ ಸ್ವಾಗತಿಸಿದರು. ಈ ತನಕ ಸುಮುಖವಾಗಿತ್ತು. ಇನ್ನು ಮುಂದಿನ ಹದಿನೆಂಟು ಕಿಲೋಮೀಟರ್ ನ ಘಾಟ್ ರಸ್ತೆ ಯ ಪ್ರಯಾಣವೇ ಎಲ್ಲಕ್ಕಿಂತ ಕಠಿಣವಾದದ್ದು ಹಾಗೂ ಅಪಾಯಕರವಾದದ್ದು ಎನ್ನುವುದು ಡ್ರೈವರ್ ಗೂ, ಟಿ.ಟಿ. ಡಿ ಛೇರ್ಮನ್ ರಾಗಿದ್ದ ನಾಗಿರೆಡ್ಡಿ ಮತ್ತು ಸ್ಪೆಷಲ್ ಆಫೀ಼ಸರ್ ಆಗಿದ್ದ ಪಿ.ವಿ.ಎಸ್.ಆರ್. ಕೆ ಪ್ರಸಾದ್ ರವರಿಗೂ ಚೆನ್ನಾಗಿ ಮನವರಿಕೆಯಾಗಿತ್ತು ಅಲ್ಲದೆ ಆತಂಕವನ್ನೂ ಕೊಟ್ಟಿತ್ತು.
ಡ್ರೈವರ್ ಒಂದು ಸಲ ಉಸಿರು ತೆಗೆದುಕೊಂಡು ಬೆಟ್ಟದ ಮೇಲೆ ನೋಡಿ ಕೈಮುಗಿದ. ಛೇರ್ಮನ್ ರಿಗೆ ಹೇಳಿದ ” ಸಾರ್, ಕಷ್ಟದ ಕೆಲಸ ನಿಜ, ನನ್ನ ಸರ್ವೀಸ್ ನಲ್ಲೇ ಈ ತರಹದ ಲೋಡ್ ಸಾಗಿಸಿಲ್ಲ. ಆದರೆ ನಮ್ಮ ವೆಂಕಟೇಶ್ವರ ಸ್ವಾಮಿಯ ದಯೆಯಿಂದ ಖಂಡಿತ ದಿಮ್ಮಿಗಳನ್ನು ರಾತ್ರಿ ಒಳಗೆ ಮೇಲಕ್ಕೆ ಮುಟ್ಟಿಸುತ್ತೇನೆ. ಇದು ಸ್ವಾಮಿ ನನಗೆ ಒಪ್ಪಿಸಿರುವ ಮಹತ್ಕಾರ್ಯ. ಏಳು ತಿರುವುಗಳಿವೆ. ಕೆಲವು ಕಡೆ ಟ್ರೈಲರ್ ತಗಲಿ ಪೌಳಿ ಗೋಡೆ ಬೀಳಬಹುದು, ಕೆಲವು ಕಡೆ ಬಂಡೆಗಳಿಗೆ ತಾಕಿ ಬಂಡೆಗಳುರುಳಬಹುದು. ಏನೂ ಚಿಂತೆ ಇಲ್ಲ. ಒಂದೇ ಕೋರಿಕೆ ನನ್ನದು. ರಸ್ತೆಯಲ್ಲಿ ಯಾವುದೇ ಸಂಚಾರ ಇಲ್ಲದಂತೆ ವ್ಯವಸ್ಥೆ ಮಾಡಿ. ಇನ್ನೊಂದು ಗಂಟೆಯಲ್ಲಿ ಮೇಲೆ ತಲುಪಿಸುತ್ತೇನೆ” ಎಂದು ಆಶ್ವಾಸನೆ ಕೊಟ್ಟ. ಅದರಂತೆ ಅಷ್ಟು ಕಾಲ ಎಲ್ಲಾ ವಾಹನ ಸಂಚಾರವನ್ನೂ ಹಳೆಯ ರಸ್ತೆಗೆ ತಿರುಗಿಸಿದರು.
ಡ್ರೈವರ್ ಬೆಟ್ಟಕ್ಕೂ ಲಾರಿಗೂ ಮತ್ತೊಮ್ಮೆ ಕೈಮುಗಿದು ಇಂಜಿನ್ ಸ್ಟಾರ್ಟ್ ಮಾಡಿದ. ಅಷ್ಟೇ. 55ನಿಮಿಷಗಳಲ್ಲಿ ನಿರ್ವಿಘ್ನವಾಗಿ ದಿಮ್ಮಿಗಳು ದೇವಸ್ಥಾನದ ಪ್ರಾಂಗಣವನ್ನು ತಲುಪಿದವು. ಪ್ರತಿಯೊಬ್ಬರೂ ದೊಡ್ಡ ನಿಟ್ಟುಸಿರು ಬಿಟ್ಟು “ಗೋವಿಂದಾ ಗೋವಿಂದ” ಎಂದು ಕೂಗುತ್ತಾ ಕುಣಿದಾಡಿದರು, ಉದ್ದಂಡ ನಮಸ್ಕಾರ ಹಾಕಿದರು. ಛೇರ್ಮನ್ ರವರು ಬಹಳ ಸಂತೋಷದಿಂದ ಡ್ರೈವರ್ ಗೂ ಜೊತೆಯಲ್ಲಿದ್ದ ಲಾರಿ ಮಾಲಿಕನಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಸಲ್ಲಿಸಿ ಒಪ್ಪಿಕೊಂಡ 70 ಸಾವಿರಕ್ಕೆ ಚೆಕ್ ಬರೆದು ಕೊಡಲು ಹೋದರು. ಆದರೆ ಅವರಿಬ್ಬರೂ ಚೆಕ್ ಮುಟ್ಟಲಿಲ್ಲ.
“ಸಾರ್, ಇದು ಸ್ವಾಮಿ ನಮಗೆ ಒಪ್ಪಿಸಿದ ಸೇವೆಯ ಕಾರ್ಯ. ಅವನ ಕೆಲಸಕ್ಕೆ ನಾವು ಹಣ ತೆಗೆದುಕೊಳ್ಳುವುದೇ??. ಖಂಡಿತ ಸಾಧ್ಯವಿಲ್ಲ ಸಾರ್” ಎಂದು ಹೇಳಿ ನಮಸ್ಕಾರ ಮಾಡಿ ವಾಪಸ್ ಹೊರಟುಬಿಟ್ಟರು.
ಛೇರ್ಮನ್ ರ ಮುಂಚೂಣಿ ಯಲ್ಲಿ ಧ್ವಜ ಸ್ತಂಭದ ಕೆಲಸ ಅಷ್ಟೇ ಮುತುವರ್ಜಿ, ಉತ್ಸಾಹಗಳಿಂದ ಪೂರ್ಣ ಗೊಂಡು 1982 ರ ಜೂನ್ ತಿಂಗಳ 10ನೇ ತಾರೀಕಿನ ದಿನ ಹೊಸ ಧ್ವಜಸ್ತಂಭವನ್ನು ವಿಧ್ಯುಕ್ತವಾಗಿ ಸ್ಥಾಪಿಸಲಾಯಿತು.
ಇದು, ಕರ್ನಾಟಕದ ದಾಂಡೇಲಿಗೂ ತಿರುಪತಿಯ ಶ್ರೀ ವೆಂಕಟೇಶ್ವರ ದೇವಾಲಯಕ್ಕೂ ಇರುವ ಅನುಬಂಧ!
(ತೆಲುಗು ಮೂಲ. ಸಂಗ್ರಹಾನುವಾದ: ಜೆ.ಬಿ.ಪಿ)
ಶ್ರೀ ಅನ್ನಪೂರ್ಣೆಶ್ವರಿ ಜ್ಯೋತಿಷ್ಯ ಪೀಠಂ
ಶ್ರೀ ಮಹಾ ಕಾಲ ಭೈರವ
ದೈವಜ್ಞ ಪಂಡಿತ್ ಗಜೇಂದ್ರ ಅವಧಾನಿಗಳು
ವಿಳಾಸ – ಡಿವಿಜಿ ರೋಡ್, ಬಸವನಗುಡಿ ಬೆಂಗಳೂರು
ಸರ್ವ ಸಮಸ್ಯೆಗಳಿಗೆ ಗುರುಗಳನ್ನು ಒಮ್ಮೆ ಭೇಟಿ ಕೊಡಿ
ಸಂಪರ್ಕಿಸಿ – 9538175275