Haveri | ಕೆ.ಬಿ.ಕೋಳಿವಾಡ ವಿರುದ್ಧ ರೈತರ ಪ್ರತಿಭಟನೆ
ಹಾವೇರಿ : ಆತ್ಮಹತ್ಯೆ ಮಾಡಿಕೊಂಡ ರೈತರ ಕುರಿತು ಅವಹೇಳನಕಾಗಿ ಮಾತನಾಡಿದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ವಿರುದ್ಧ ರೈತರು ತಿರುಗಿಬಿದ್ದಿದ್ದಾರೆ.
ಮೊನ್ನೆ ರಾಣೆಬೇನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಕುರಿತು ಅವಹೇಳನವಾಗಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು.

ನೇಣು ಹಾಕಿಕೊಂಡು ಸತ್ನಾ, ನಾನೇನೂ ಸಾಯಿ ಅಂದಿದ್ನಾ? ಹೋಗಿ ಮಾಲಿ ಹಾಕಿದ್ರೆ ಏನಾದರೂ ದುಡ್ಡು ಕೊಟ್ಟು ಹೋಗ್ರಿ ಅಂತಾರಾ…! ಇಂತವೆಲ್ಲಾ ನಮ್ಮ ಕಾರ್ಯಕರ್ತರು ಕಲಿಬ್ಯಾಡ್ರಿ ಎಂದು ಕೆ.ಬಿ.ಕೋಳಿವಾಡ ಹೇಳಿದ್ದರು.
ಮಾಜಿ ಸ್ಪೀಕರ್ ಅವರ ಈ ಹೇಳಿಕೆಯನ್ನು ಖಂಡಿಸಿ ಹಾವೇರಿಯ ಜಿಲ್ಲೆಯ ರಾಣೆಬೇನ್ನೂರು ನಗರದಲ್ಲಿ ರೈತರ ಪ್ರತಿಭಟನೆ ನಡೆಸುತ್ತಿದ್ದಾರೆ.








