ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ರಾಜ್ಯ ಹೈಕೋರ್ಟ್ ಮೊದಲ ಬಾರಿಗೆ ಬ್ರೇಕ್ ಹಾಕಿದೆ. ಲಾಕ್‌ಡೌನ್ ಇರುವ ಕಾರಣ ನಗರಾದ್ಯಂತ 144 ಸೆಕ್ಷನ್ ಜಾರಿ ಇದೆ. ನಿಷೇಧಾಜ್ಞೆ ಜಾರಿ ಇರುವ ಕಾರಣ ಯಾವುದೇ ಧಾರ್ಮಿಕ ಸಭೆ, ಸಮಾರಂಭಗಳಿಗೆ ಅನುಮತಿ ನೀಡುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಬೆಂಗಳೂರು ಕರಗವನ್ನ ಸರಳವಾಗಿ ಆಚರಣೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು, ಆದರೆ ಆಚರಣೆ ಸಮಯದಲ್ಲಿ ಸಾರ್ವಜನಿಕರು ಭಾಗಿಯಾಗುತ್ತಾರೆ. ಜನ ಜಂಗುಳಿಯಲ್ಲಿ ಕೊರೊನಾ ಹರಡುವ ಸಾಧ್ಯತೆಯಿದೆ.. ಹೀಗಾಗಿ ಬೆಂಗಳೂರು ಕರಗ ಆಚರಣೆ ಮಾಡದಂತೆ ಹೈಕೋರ್ಟ್ ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಕರಗ ಮಹೋತ್ಸವಕ್ಕೆ ಸಾಕಷ್ಟು ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿನ ತಿಗಳರ ಸಮುದಾಯ ಈ ಸಂಪ್ರದಾಯವನ್ನು ತಲೆತಲಾಂತರಗಳಿಂದ ಪಾಲಿಸುತ್ತಿದೆ. ಪ್ರತಿ ಏಪ್ರಿಲ್ ತಿಂಗಳ ಎರಡನೇ ವಾರ ನೆರವೇರುವ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶದಿಂದ ಲಕ್ಷಾಂತರ ಜನ ಬೆಂಗಳೂರಿಗೆ ಆಗಮಿಸುತ್ತಾರೆ.








