ಬೆಂಗಳೂರು: ನಾಳೆ ಕರ್ನಾಟಕದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 45ನೇ ಹುಟ್ಟುಹಬ್ಬ. ಈ ಹಿನ್ನೆಲೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಶುಭಾಶಯ ತಿಳಿಸಿದ್ದು, ಈ ವಿಡಿಯೋ ಅಪ್ಪು ಫ್ಯಾನ್ಸ್ ನ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹರಿದಾಡ್ತಿದೆ. ವಿಡಿಯೋದಲ್ಲಿ ದೇವೇಗೌಡರು, ಅಣ್ಣಾವ್ರು ಹಾಗೂ ಅಪ್ಪು ಜೊತೆಯಾಗಿ ನಟಿಸಿದ ಭಕ್ತ ಪ್ರಹ್ಲಾದ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೆ ಪವರ್ ಸ್ಟಾರ್ ಡಾ.ರಾಜ್ ಗಿಂತಲೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.
ಇನ್ನೊಂದೆಡೆ ಪವರ್ ಸ್ಟಾರ್ ಬರ್ತ್ ಡೇ ಹಿನ್ನೆಲೆ ಅಪ್ಪು ಅಭಿಮಾನಿಗಳು ಪುನೀತ್ರ ಕಾಮನ್ ಡಿಪಿಯನ್ನು ಮಾಡಿದ್ದಾರೆ.
ಇನ್ನು ಕೊರೊನಾ ಸೋಂಕಿನಿಂದಾಗಿ ಅಪ್ಪು ಈ ಬಾರಿ ಅಭಿಮಾನಿಗಳಿಗೆ ಸಿಗುತ್ತಿಲ್ಲ. ಈ ಬಗ್ಗೆ ವಿಡಿಯೋವೊಂದನ್ನು ಅಪ್ಪು ಬಿಡುಗಡೆ ಮಾಡಿದ್ದು, ಈ ವರ್ಷ ನಾನು ಹುಟ್ಟಿದ ಹಬ್ಬ ಆಚರಿಸಿಕೊಳ್ತಿಲ್ಲ. ಅಂದು ಬೇರೆ ಬೇರೆ ಊರುಗಳಿಂದ ಬರುತ್ತಿದ್ದೀರಿ, ಈ ಬಾರಿ ಬರಬೇಡಿ. ಅಂದು ನಾನು ಮನೆಯಲ್ಲಿ ಇರೋದಿಲ್ಲ. ಇದಕ್ಕೆ ಕಾರಣ ನಿಮಗೆಲ್ಲಾ ಗೊತ್ತಿರೋ ಹಾಗೆ ನಮ್ಮ ದೇಶ ಸೇರಿದಂತೆ ಪ್ರಪಂಚದಾದ್ಯಂತ ಕೊರೊನಾ ಸಮಸ್ಯೆ ಎದುರಾಗಿರೋದು ಗೊತ್ತೇ ಇದೆ. ಇದಕ್ಕಾಗಿ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿರೋದ್ರಿಂದ ಅದನ್ನ ನಾವೆಲ್ಲರೂ ಪಾಲಿಸಲೇಬೇಕು. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಎಂದೂ ಚಿರಣಿಯಾಗಿರ್ತೀನಿ. ನೀವು ಹುಷಾರಾಗಿರಿ. ಧನ್ಯವಾದ ‘ ಅಂತಾ ತಿಳಿಸಿದ್ದಾರೆ.
https://youtu.be/Decw7yxacds








