ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಮುಖ್ಯ, ಅನೇಕ ವಿಭಾಗಗಳಲ್ಲಿ ಹೆಣ್ಣು ಮಕ್ಕಳು ಕೆಲಸ ಮಾಡ್ತಾ ಇದ್ದಾರೆ , ಇದು ಈ ಪಕ್ಷದ ನೆಲೆ, ಮೀಸಲಾತಿ ಸಿಗುವ ವಿಚಾರ ಈ ಪಕ್ಷದ ಉದ್ದೇಶ.. ಪೊಲೀಸ್ ಕಾನ್ಟೇಬಲ್ ನಿಂದ ಹಿಡಿದು ಉನ್ನತ ಸ್ಥಾನದಲ್ಲೂ ಹೆಣ್ಣು ಮಕ್ಕಳು ಇದ್ದಾರೆ ಎಂದು ಹೆಚ್ ಡಿ ದೇವೇಗೌಡ ಅವರು ಹೇಳಿದ್ದಾರೆ. ಅಲ್ಲದೇ ಕಾರ್ಪೊರೇಷನ್ ನ ಚುನಾವಣೆಗೆ ನಿಲ್ಲುವ ಹೆಣ್ಣು ಮಕ್ಕಳು ಎಷ್ಟಿದ್ದೀರಾ ಹೇಳಿ, 33 ಪರ್ಸೆಂಟ್ ರಿಸರ್ವೇಷನ್ ಕೊಡಲೇಬೇಕು. ನೀವು ಕ್ಷೇತ್ರ ಕೈಗೆತ್ತಿಕೊಳ್ಳಬೇಕು, ನೀವು ಕ್ಷೇತ್ರದಲ್ಲಿ ನಿಂತು ನಾಳೆಯಿಂದ ಕೆಲಸ ಮಾಡ್ತೀವಿ ಅಂದ್ರೆ ಶಕ್ತಿ ನಾವು ತುಂಬುತ್ತೇವೆ ಎಂದಿದ್ದಾರೆ.
ಹಾಗೆಯೇ ಹೊಳೆ ನರಸೀಪುರದ ಡಿಗ್ರಿಕಾಲೇಜಿನಲ್ಲಿ 1200 ಹೆಣ್ಣು ಮಕ್ಕಳು ಓದ್ತಾ ಇದ್ದಾರೆ, ಈ ಪಕ್ಷ ಉಳಿಸೋದು ಕೂಡ ನೀವುಗಳೆ, ಇತಿಹಾಸದ ಹೆಣ್ಣು ಮಕ್ಕಳ ಹೆಸರು ಕೇಳಿದ್ರೆ ನಾವು ಹಾಗೆ ಮಾಡಬೇಕು ಎಂಬ ಇಚ್ಚೆ ಬರಬೇಕು ಎಂದಿದ್ಧಾರೆ.. ಮಹಿಳಾ ದಿನಾಚರಣೆ ಪ್ರಯುಕ್ತ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ದೇವೇಗೌಡರು ಈ ಮಾತುಗಳನ್ನಾಡಿದ್ದಾರೆ.








