ನಾನು 2 ಬಾರಿಯೂ ಅದೃಷ್ಟದಿಂದಲೇ ಸಿಎಂ ಆದೆ. ಜನರ ಆರ್ಶೀವಾದದಿಂದ ಅಲ್ಲ – ಹೆಚ್ ಡಿಕೆ
ನಾನು ಎರಡು ಬಾರಿಯೂ ಅದೃಷ್ಟದಿಂದಲೇ ಸಿಎಂ ಆದೆ
ಮುಂದೆ ಜೆಡಿಎಸ್ ಗೆ ಒಳ್ಳೆಯ ಭವಿಷ್ಯ ಇದೆ – ಹೆಚ್ ಡಿಕೆ ವಿಶ್ವಾಸ
ರಾಮನಗರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ
ರಾಮನಗರ: ಮುಂದೆ ಜೆಡಿಎಸ್ ಗೆ ಒಳ್ಳೆಯ ಭವಿಷ್ಯ ಇದೆ. ನಾನು ಎರಡು ಬಾರಿಯೂ ಅದೃಷ್ಟದಿಂದಲೇ ಸಿಎಂ ಆದೆ. ಜನರ ಆರ್ಶೀವಾದದಿಂದ ನಾನು ಸಿಎಂ ಆಗಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಹೇಳಿಕೊಂಡಿದ್ದಾರೆ. ನಗರದ ಶಕ್ತಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾತನಾಡಿರುವ ಅವರು.. ತಾಯಿ ಚಾಮುಂಡೇಶ್ವರಿ ನನಗೆ ಅಧಿಕಾರ ಕೊಡ್ತಾಳೆ. ಆ ಭರವಸೆ ಇದೆ.. ರಾಜ್ಯದ ಜನರ ಪರವಾಗಿ ಜೆಡಿಎಸ್ ಕೆಲಸ ಮಾಡಲಿದೆ .
ಜೆಡಿಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಮುಂದೆ ಉತ್ತರ ಸಿಗಲಿದೆ . ತಾಯಿ ಚಾಮುಂಡೇಶ್ವರಿ ಜೆಡಿಎಸ್ ಗೆ ಅಧಿಕಾರ ಕೊಡ್ತಾಳೆ ಎನ್ನುವ ವಿಶ್ವಾಸ ಇದೆ ಎಂದಿದ್ದಾರೆ. ಅಲ್ಲದೇ ಬಿಜೆಪಿ ಯ ಹೊಸ ಸಿಎಂ ಆಯ್ಕೆ ವಿಚಾರವಾಗಿ ಮಾತನಾಡಿದ ಹೆಚ್ ಡಿಕೆ ಅದು ಅವರ ಪಕ್ಷದ ಆಂತರಿಕ ವಿಚಾರ . ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ . ಈಗಾಗಲೇ ಪ್ರಧಾನಿ ಮೋದಿಯವರು ರಾಜ್ಯದ ಬಗ್ಗೆ ಮಾಹಿತಿ ಪಡೆದಿರುತ್ತಾರೆ. ಹಾಗಾಗಿ ಯಾರು ಸಿಎಂ ಆಗಬೇಕೆಂದು ಅವರ ಪಕ್ಷ ನಿರ್ಧಾರ ಮಾಡಲಿದೆ ಎಂದಿದ್ದಾರೆ.
ಇದೇ ವೇಳೆ ಯಡಿಯೂರಪ್ಪ ಪರವಾಗಿ ಕಾಂಗ್ರೆಸ್ ನಾಯಕರ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿದ ಅವರು ಇದು ಒಂದು ಸಮುದಾಯದ ಓಲೈಕೆಗಾಗಿ ಮಾಡ್ತಿರುವ ಪ್ರಯತ್ನ . ಈಗಾಗಲೇ ಮುಂದಿನ ಸಿಎಂ ಗೆ ಟವೆಲ್ ಹಾಕಿರುವವರು ಹೇಳ್ತಾರೆ . ಈಗಿದ್ದ ಸಿಎಂ ಭ್ರಷ್ಟರು, ಮುಂದೆ ಬರುವವರು ಭ್ರಷ್ಟರೇ ಎಂದು ಹೇಳ್ತಾರೆ. ಆದರೆ ಮತ್ತೊಬ್ಬರು ಯಡಿಯೂರಪ್ಪ ಪರವಾಗಿ ಮಾತನಾಡ್ತಾರೆ . ಈಗ ಅವರ ಪರವಾಗಿ ಮಾತನಾಡ್ತಿರೋದು ಸಮುದಾಯದ ಓಲೈಕೆಗಾಗಿ ಅಷ್ಟೇ ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ..