ಮತ್ತೆ ಕಣ್ಣೀರು ಹಾಕಿದ ಹೆಚ್ಡಿ ಕುಮಾರಸ್ವಾಮಿ.
ಸೂಟ್ಕೇಸ್ ತೆಗೆದುಕೊಂಡು ಚುನಾವಣೆ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಆರೋಪಕ್ಕೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡುವ ಭರದಲ್ಲಿ ಭಾವುಕರಾದರು. ಕುಮಾರಸ್ವಾಮಿಯನ್ನು ನಾವೇ ಸಾಕಿದ್ದು, ನಾವೇ ಬೆಳೆಸಿದ್ದು ಅಂತಾರೆ. ಈ ಪಕ್ಷ ಕಟ್ಟಲು ನಾನು ಕಷ್ಟಪಟ್ಟಿದ್ದೇನೆ ಎಂದು ಕಣ್ಣೀರುಗೆರೆಯುತ್ತಾ ಹೆಚ್ಡಿ ಕುಮಾರಸ್ವಾಮಿ ಭಾವುಕರಾದರು. ಇಸ್ರೇಲ್‍ನಲ್ಲೇ ನನ್ನ ಪ್ರಾಣ ಹೋಗಬೇಕಿತ್ತು. ನನ್ನ ತಂದೆ ತಾಯಿಯ ಆರ್ಶಿವಾದದಿಂದ ನಾನು ಉಳಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
2018 ಚುನಾವಣೆ ನಂತರ ಯಾವುದೇ ಬಹುಮತ ಬರಲಿಲ್ಲ. ಜೆಡಿಎಸ್‍ಗೆ ಬಂದಿದ್ದು 37 ಸ್ಥಾನಗಳು. ಕಾಂಗ್ರೆಸ್ ನಾಯಕರೇ ಬಂದು ಸರ್ಕಾರ ಮಾಡಲು ದುಂಬಾಲು ಬಿದ್ದರು. ಖರ್ಗೆ ಅವರನ್ನೇ ಸಿಎಂ ಮಾಡಿ ಎಂದು ದೇವೇಗೌಡರು ಹೇಳಿದರು. ಆದರೆ ದೆಹಲಿಯ ನಾಯಕರು ನೀವೇ ಮುಖ್ಯಮಂತ್ರಿ ಆಗಿ ಎಂದರು. ಲಕ್ಷಾಂತರ ಕಾರ್ಯಕರ್ತರು ಕಟ್ಟಿರುವ ಪಕ್ಷ ಇದು. ಆದರೆ ಬಿಜೆಪಿಯ ಬಿ ಟೀಂ ಆಗಿ ಜೆಡಿಎಸ್ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸಿಗರು ಆರೋಪಿಸಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಶಿರಾದ ಗುಬ್ಬಿಯಲ್ಲಿ ಜೆಡಿ ಎಸ್ ನಾಯಕರಾದ ಎಸ್ ಆರ್ ಶ್ರೀನಿವಾಸ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ನಡುವಣ ಜಟಾಪಟಿ ಮುಂದುವರಿದಿದೆ. ತುಮಕೂರಲ್ಲಿ ದೇವೇಗೌಡರು ಸೋಲಲು ಶ್ರೀನಿವಾಸ್ ಕಾರಣ. ರಾಜಕೀಯವಾಗಿ ಹೆಚ್ ಡಿ ದೇವೇಗೌಡರನ್ನು ಮುಗಿಸಲು ಯಾರು ಯಾರ ಜತೆ ಸೇರಿದ್ದರು ಎಂದು ಕಾರ್ಯಕರ್ತರಿಗೆ ಗೊತ್ತಿದೆ ಎಂದು S.R. ಶ್ರೀನಿವಾಸ್ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.