ಸರಿಯಾಗಿ ಮಾತನಾಡೋದು ಕಲಿ : ಸಿದ್ದರಾಮಯ್ಯ ವಿರುದ್ಧ ಹೆಚ್ ಡಿಕೆ ಏಕವಚನ ಪ್ರಯೋಗ
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಏಕವಚನದಲ್ಲಿ ಕಿಡಿಕಾರಿದ್ದಾರೆ.
ನಗರದಲ್ಲಿ ಜೆಪಿಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ನನಗೆ ಏಕವಚನ ಬಳಸಿ ಮಾತಾನಾಡ್ತಾರೆ.
ಈ ಕುಮಾರಸ್ವಾಮಿಗೆ ನಾಚಿಕೆ ಆಗಲ್ವಾ ಅಂತಾರೆ. ನನಗೆ ಏಕೆ ನಾಚಿಕೆ ಆಗಬೇಕು, ನಿಮ್ಮ ತರ ಡಬಲ್ ಸ್ಟ್ಯಾಂಡರ್ಡ್ ರಾಜಕೀಯ ಮಾಡೋದಿಲ್ಲ.
ದೇವೇಗೌಡ ನೇಗಿಲು ಹಿಡಿದಿದ್ನಾ, ಸಗಣಿ ಎತ್ತಿದ್ನಾ ಅಂತ ಮಾತಾಡ್ತೀಯಾ? ನಿನಗೇನಪ್ಪ ಗೊತ್ತು ದೇವೇಗೌಡರ ಬಗ್ಗೆ.
ದೇವೇಗೌಡರು ಕೃಷಿ ಮಾಡಿದ್ದಾರೆ, ನಾವು ಸಗಣಿ ಬಾಚಿರೋರೆ, ಮಾತಾಡುವಾಗ ಸರಿಯಾಗಿ aಕಲಿತುಕೊಳ್ಳಿ ಎಂದು ಸಿದ್ದರಾಮಯ್ಯ ವಿರುದ್ಧ ಹರಿಯ್ದರು.
ಇನ್ನು ಭೂಸುಧಾರಣೆ ಕಾಯ್ದೆ ಜೆಡಿಎಸ್ ಬೆಂಬಲಿಸಿದ್ದಕ್ಕೆ ಭಾರಿ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ನಾನು ಬೇನಾಮಿ ಆಸ್ತಿ ಮಾಡಿದ್ದೀನಿ ಅಂತ ಆರೋಪ ಮಾಡ್ತಿದ್ದಾರೆ.
ಆದ್ರೆ ಜೆಡಿಎಸ್ ನಿಲುವು, ಯಾವತ್ತೂ ಮಾರಕವಾಗೋದಕ್ಕೆ ಬೆಂಬಲ ಕೊಡೋದಿಲ್ಲ. ಎಲ್ಲವನ್ನೂ ಲೆಕ್ಕಾಚಾರ ಮಾಡಿಯೇ ತೀರ್ಮಾನಕ್ಕೆ ಬಂದಿರೋದು.
ಗೋ ಹತ್ಯೆ ನಿಷೇಧಕ್ಕೆ ನಮ್ಮ ವಿರೋಧವಿಲ್ಲ : ಸಿದ್ದರಾಮಯ್ಯ
1963ರಲ್ಲಿ ಇದ್ದಂತಹ ಕಾಯ್ದೆಯನ್ನೇ ಮುಂದುವರೆಸಿದ್ದಾರೆ. ನಾನು ಬೆಂಬಲಕೊಟ್ಟೆ, ಈ ಮೊದಲು ನಾನು ಕೂಡ ವಿರೋಧಿಸಿದ್ದೆ, ದೇವೇಗೌಡರು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆಮೇಲೆ ಎಲ್ಲಾ ತಿಳ್ಕೊಂಡೇ ಬೆಂಬಲ ಕೊಟ್ಟಿರೋದು ಎಂದು ವಿವರಿಸಿದರು.
ಇದೇ ವೇಳೆ ಸಿದ್ದರಾಮಯ್ಯಗೆ ಸವಾಲ್ ಹಾಕಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರೇ ನಾನು ಯಾವುದಾದರೂ ಬೇನಾಮಿ ಆಸ್ತಿ ಮಾಡಿರೋದನ್ನು ಸಾಬೀತು ಮಾಡಿಬಿಟ್ಟರೆ, ನಾನು ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆ.
ನಮ್ಮನ್ನು ಅಪ್ಪನಿಂದ ಮಕ್ಕಳವರೆಗೆ ಕಣ್ಣೀರು ಹಾಕುವುದೇ ಸಂಸ್ಕøತಿ ಅಂತಾರೆ. ನೀನು ಡಿಸಿಎಂ ಆದನಂತರ ಸೋತ ನಂತರ ಬಂದು ದೇವೇಗೌಡರ ಮುಂದೆ ಕಣ್ಣೀರು ಹಾಕಿದ್ದೆ. ನಾವು ಜನರ ಕಷ್ಟ ನೋಡಿ ಕಣ್ಣೀರು ಹಾಕುತ್ತೇವೆ ಎಂದು ಗುಡುಗಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel