ಲಕ್ನೋ, ಜುಲೈ 11: ವಿಕಾಸ್ ದುಬೆ ಅವರನ್ನು ಪೊಲೀಸರು ಎನ್ ಕೌಂಟರ್ ಮಾಡಿರುವುದನ್ನು ಸರಿಯಾದ ಕ್ರಮ ಎಂದು ಆತನ ಪತ್ನಿ ಸಮರ್ಥಿಸಿ ಕೊಂಡಿದ್ದಾರೆ. ಎಂಟು ಪೊಲೀಸರ ಹತ್ಯೆಗೈದಿದ್ದ ವಿಕಾಸ್ ದುಬೆ ಅವರನ್ನು ಪೊಲೀಸರು ಬಂಧಿಸಿ
ಕಾನ್ಪುರಕ್ಕೆ ಕರೆದೊಯ್ಯುವಾಗ ಆತ ಪರಾರಿಯಾಗಲು ಪ್ರಯತ್ನಿಸಿದ್ದ. ಆಗ ಪೊಲೀಸರು ದುಬೆಯನ್ನು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದರು. ಅತ್ತ ವಿಕಾಸ್ ದುಬೆಯನ್ನು ಬಂಧಿಸುತ್ತಿದ್ದಂತೆ ಇತ್ತ ಲಖನೌದಲ್ಲಿ ಆತನ ಪತ್ನಿ ಮತ್ತು ಮಗನನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಇಂದು ವಿಕಾಸ್ ದುಬೆ ಪತ್ನಿಯ ಬಳಿ ತೆರಳಿದ ಮಾಧ್ಯಮದವರು ನಿಮ್ಮ ಪತಿ ಎನ್ ಕೌಂಟರ್ ಗೆ ಬಲಿಯಾಗಿದ್ದು ನ್ಯಾಯವೇ? ಅವರ ಸಾವಿನ ಬಗ್ಗೆ ನಿಮ್ಮ ಅನಿಸಿಕೆ ಏನು ಎಂದು ಪ್ರಶ್ನಿಸಿದಾಗ ಆಕೆ ಪೊಲೀಸರು ಎನ್ ಕೌಂಟರ್ ಮಾಡಿರುವುದು ಸರಿಯಾಗಿದೆ ಎಂದು ಆವೇಶದಿಂದ ಉತ್ತರಿಸಿದ್ದಾಳೆ.
ಇಂಥದ್ದೊಂದು ಸಾವಿಗೆ ಆತ ಯೋಗ್ಯನಾಗಿದ್ದ.
ಅವನ ಹಣೆಬರಹದಂತೆ ಆಗಿದೆ ಎಂದು ಕೂಗಾಡಿದ ಆಕೆ ನೀವೆಲ್ಲ ಈ ಜಾಗದಿಂದ ಹೊರಟು ಹೋಗಿ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಈತನ ಸಹೋದರಿ ಕೂಡ ಮಡಿದ ಕ್ರೂರ ಅಪರಾಧಕ್ಕೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸದಳು.