ತಲೆನೋವು ಮತ್ತು ಮೈ-ಕೈ ನೋವು ಸಹ ಕೊರೊನಾ ಲಕ್ಷಣಗಳು – ಡಾ.ಸಿ.ಎನ್. ಮಂಜುನಾಥ್
ಬೆಂಗಳೂರು, ಜುಲೈ 10: ವಿಶ್ವವನ್ನೇ ಕಂಗೆಡಿಸಿರುವ ಕೊರೊನಾ ವೈರಸ್ ಇದೀಗ ತನ್ನ ರೋಗ ಲಕ್ಷಣಗಳನ್ನು ಬದಲಾಯಿಸಿಕೊಳ್ಳುತ್ತಿದೆ. ಶೀತ, ಜ್ವರ, ಕೆಮ್ಮು ಎಂಬ ರೋಗಲಕ್ಷಣಗಳನ್ನು ಆರಂಭದಲ್ಲಿ ತೋರಿಸಿದ ಸೋಂಕು ಇದೀಗ ಹೊಸ ಹೊಸ ರೋಗ ಲಕ್ಷಣಗಳನ್ನು ಕಾಣಿಸುತ್ತಿದೆ.
ಕೊವಿಡ್ ಟಾಸ್ಕ್ಫೋರ್ಸ್ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ಡಾ.ಸಿ.ಎನ್. ಮಂಜುನಾಥ್ ಅವರು ತಲೆನೋವು ಮತ್ತು ಮೈ-ಕೈ ನೋವು ಸಹ ಸೋಂಕಿನ ಹೊಸ ಲಕ್ಷಣಗಳು ಎಂಬ ಮಾಹಿತಿಯನ್ನು ನೀಡಿದ್ದಾರೆ.
ತಲೆನೋವು ಅಥವಾ ಮೈ-ಕೈ ನೋವೇನಾದರೂ ನಿಮಗೆ ಕಾಣಿಸಿಕೊಂಡರೆ ತಕ್ಷಣವೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿರುವ ಡಾ.ಸಿ.ಎನ್. ಮಂಜುನಾಥ್ ಇತ್ತೀಚಿನ ದಿನಗಳಲ್ಲಿ ಕೊರೊನಾ ಸೋಂಕು ದೃಢಪಟ್ಟವರಲ್ಲಿ ತಲೆನೋವು ಮತ್ತು ಮೈ-ಕೈ ನೋವಿನ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಹೇಳಿದ್ದಾರೆ.
ಡಾ.ಸಿ.ಎನ್. ಮಂಜುನಾಥ್ ಅವರು ತಿಳಿಸಿರುವ ಪ್ರಕಾರ
ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ, ವಾಸನೆ ಗ್ರಹಿಕೆ ಮತ್ತು ರುಚಿಯಲ್ಲಿ ವ್ಯತ್ಯಾಸ, ತಲೆನೋವು, ಮೈ-ಕೈ ನೋವು ಕೊನೆಯ ಸೋಂಕಿನ ಲಕ್ಷಣಗಳು.