Headbush – ಡಾಲಿ ಕಟೌಟ್ ಗೆ ಚಪ್ಪಲಿ ಹಾರ ಹಾಕಿದ ಭಜರಂಗದಳ
ವೀರಗಾಸೆ ಕುಣಿತಕ್ಕೆ ಅಪಮಾನ ಮಾಡಿದ ಆರೋಪ
ಮುಖಕ್ಕೆ ಮಸಿ ಬಳಿದು ಭಜರಂಗದಳ ಆಕ್ರೋಶ
ಡಾಲಿ ಧನಂಜಯ ಕ್ಷಮೆ ಕೇಳಬೇಕು ಎಂದು ಆಗ್ರಹ
ತುಮಕೂರು : ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಕುಣಿತಕ್ಕೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ನಟ ಡಾಲಿ ಧನಂಜಯ್ ಕಟೌಟ್ ಗೆ ಭಜರಂಗದಳದ ಕಾರ್ಯಕರ್ತರು ಚಪ್ಪಲಿ ಹಾರ ಹಾಕಿ, ಕಪ್ಪು ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.
ತಿಪಟೂರು ನಗರದ ಲಕ್ಷ್ಮಿ ಚಿತ್ರಮಂದಿರದ ಆವರಣದಲ್ಲಿ ಈ ಘಟನೆ ನಡೆದಿದೆ. ಚಿತ್ರದಲ್ಲಿನ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕಬೇಕು ಹಾಗೂ ಡಾಲಿ ಧನಂಜಯ ಕ್ಷಮೆ ಕೇಳಬೇಕು ಎಂದು ಭಜರಂಗದಳದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಇಲ್ಲದಿದ್ದರೇ ಯಾವ ಚಿತ್ರಮಂದಿರಗಳಲ್ಲೂ ಸಿನಿಮಾ ಪ್ರದರ್ಶನ ಮಾಡದಂತೆ ತಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತೊಂದು ಕಡೆ ಡಾಲಿ ಧನಂಜಯ ಪರ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಶುರುವಾಗಿದೆ.
ಸ್ಟಾಂಡ್ ವಿಥ್ ಡಾಲಿ ಎಂಬ ಹ್ಯಾಷ್ ಟ್ಯಾಗ್ ನೊಂದಿಗೆ ಡಾಲಿ ಪರ ಜನರು ನಿಲ್ಲುತ್ತಿದ್ದಾರೆ.