ಕಿತ್ತಳೆ ಸಿಪ್ಪೆ ಚಹಾದ ಆರೋಗ್ಯ ಪ್ರಯೋಜನಗಳು ತಿಳಿಯೋಣ ಬನ್ನಿ…
ಕಿತ್ತಳೆ ಸಿಪ್ಪೆಯಿಂದ ತಯಾರಿಸಿದ ಚಹಾ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಜೀರ್ಣಾಂಗ ಆರೋಗ್ಯ ಸುಧಾರಿಸುತ್ತದೆ. ಇದರಿಂದ ಕ್ಯಾನ್ಸರ್, ಮಲಬದ್ಧತೆ, ಟೈಪ್ 2 ಮಧುಮೇಹ, ಉರಿಯೂತ ಮುಂತಾದ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯಬಹುದು. ಜೊತೆಗೆ, ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಕಿತ್ತಳೆ ಸಿಪ್ಪೆ ಚಹಾ ತಯಾರಿಸುವ ವಿಧಾನ:
ಸ್ವಲ್ಪ ಕಿತ್ತಳೆ ಸಿಪ್ಪೆ, ½ ಇಂಚಿನ ದಾಲ್ಟಿನ್ನಿ ಕಡ್ಡಿ, 2-3 ಲವಂಗ, 1-2 ಏಲಕ್ಕಿ, ½ ಟೀಸ್ಪೂನ್ ಬೆಲ್ಲವನ್ನು ನೀರಿಗೆ ಸೇರಿಸಿ.
2-3 ನಿಮಿಷಗಳ ಕಾಲ ಕುದಿಸಿ.
ನಂತರ ಸೋಸಿ, ಕಿತ್ತಳೆ ಸಿಪ್ಪೆ ಚಹಾ ಸವಿಯಿರಿ!








