`Omicron ಹೊಸ ತಳಿ’ ಸಮುದಾಯದಲ್ಲಿ ವೇಗವಾಗಿ ಹರಡುತ್ತೆ : ಕೆ.ಸುಧಾಕರ್
ಬೆಂಗಳೂರು : ಒಮಿಕ್ರಾನ್ ಹೊಸ ತಳಿಯ ಬಗ್ಗೆ ಡಬ್ಯು ಹೆಚ್ ಒ ನಾಮಕಾರಣ ಮಾಡಿದ್ದಾರೆ. ಸಮುದಾಯಕ್ಕೆ ಬಂದ್ರೆ ವೇಗವಾಗಿ ಹರಡುತ್ತೆ ಎಂಬ ಮಾಹಿತಿ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಕೆಲ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿರುವ ಬೊಟ್ಸ್ ವಾನಾ ಹೊಸ ರೂಪಾಂತರಿ ತಳಿಯ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದರು.
ಒಮಿಕ್ರಾನ್ ಹೊಸ ತಳಿಯ ಬಗ್ಗೆ ಡಬ್ಯು ಹೆಚ್ ಒ ನಾಮಕಾರಣ ಮಾಡಿದ್ದಾರೆ. ಸಮುದಾಯಕ್ಕೆ ಬಂದ್ರೆ ವೇಗವಾಗಿ ಹರಡುತ್ತೆ ಎಂಬ ಮಾಹಿತಿ ಇದೆ.
ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿ, ಹರಡುವ ತೀವ್ರತೆ ಬಗ್ಗೆ ಪರೀಕ್ಷೆ ಮಾಡಲಾಗುತ್ತದೆ. ಆದ್ರೆ ಇದರ ಬಗ್ಗೆ ಸದ್ಯಕ್ಕೆ ಆತಂಕ ಪಡೋದು ಬೇಡ ಎಂದು ಸಚಿವರು ಹೇಳಿದ್ದಾರೆ.
ಇನ್ನು ನಿನ್ನೆ ಸಭೆ ನಡೆಸಿದ್ದೇವೆ.. ಏರ್ ಫೋಟ್9 ಗಳಲ್ಲಿ ಟೆಸ್ಟ್ ಮಾಡಲಾಗುತ್ತೆ. ನೆಗಟಿವ್ ಬರೋ ತನಕ ಹೊರಗಡೆ ಬರೋ ಹಾಗಿಲ್ಲ.
ಈಗಾಗಲೇ ಮಾರ್ಗ ಸೂಚಿ ಪ್ರಕಟ ಮಾಡಿದ್ದೇವೆ. ನೆಗಟಿವ್ ಬಂದ ಮೇಲೂ ಒಂದು ವಾರ ಕ್ವಾರಂಟೈನ್ ನಲ್ಲಿರಬೇಕು ಎಂದು ತಿಳಿಸಿದರು.
ಧಾರವಾಡದ ಕಾಲೇಜಿನಲ್ಲಿ ಕೊರೊನಾ ಸ್ಪೋಟದ ಬಗ್ಗೆ ಮಾತನಾಡಿದ ಅವರು, ಧಾರವಾಡದ ವಿದ್ಯಾರ್ಥಿಗಳ ಜಿನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳಿಸಲಾಗಿದೆ. ಇಂಟರ್ ನ್ಯಾಷನಲ್ ಸ್ಕೂಲ್ ನ 30 ಮಕ್ಕಳಿಗೆ ಪಾಸಿಟಿವ್ ಆಗಿದೆ ಎಂದು ತಿಳಿಸಿದರು.









