ಚಳಿಗಾಲದಲ್ಲಿ ವೈರಲ್ ಜ್ವರ ಮತ್ತು ಇನ್‌ಫೆಕ್ಷನ್‌ಗಳು ಸಾಮಾನ್ಯವಾಗಿವೆ. ಶೀತ, ಗಂಟಲು ನೋವು, ಮೈಕೈ ನೋವು ಮತ್ತು ತೀವ್ರ ಜ್ವರವು ಆರೋಗ್ಯವನ್ನು ಹಾಳುಮಾಡಬಹುದು. ಇಂತಹ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಸರಿಯಾದ ಆಹಾರ ಸೇವನೆಯೂ ಅತ್ಯಂತ ಮುಖ್ಯ.
1. ಹಸಿರು ತರಕಾರಿ – ಪಾಲಕ್ ಮತ್ತು ಮೆಥಿ:
ಹಸಿರು ತರಕಾರಿ, ವಿಶೇಷವಾಗಿ ಪಾಲಕ್ ಮತ್ತು ಮೆಥಿ, ಕಬ್ಬಿಣಾಂಶ ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಮಾತ್ರವಲ್ಲ, ದೇಹದ ಬಲವನ್ನು ಹೆಚ್ಚಿಸುತ್ತವೆ. ಪಾಲಕ್ ಸೂಪ್ ಅಥವಾ ಸಾರು ರೂಪದಲ್ಲಿ ಸೇವಿಸಿದರೆ ಉತ್ತಮ.
2. ನೆಲ್ಲಿಕಾಯಿ:
ನೆಲ್ಲಿಕಾಯಿ ವಿಟಮಿನ್ Cಯ ಪ್ರಬಲ ಮೂಲ. ಇದನ್ನು ನಿತ್ಯ ಸೇವಿಸುವುದು ವೈರಲ್ ಜ್ವರದ ಬೇಗನೆ ಗುಣಮುಖವಾಗಲು ನೆರವಾಗುತ್ತದೆ. ಇದನ್ನು ಹಸಿಯಾಗಿ ತಿನ್ನಬಹುದು ಅಥವಾ ನೆಲ್ಲಿಕಾಯಿ ಪಚಡಿ ರೂಪದಲ್ಲಿ ಸೇವಿಸಲು ಸಾಧ್ಯ.
3. ಶುಂಠಿ ಮತ್ತು ಬೆಳ್ಳುಳ್ಳಿ:
ಶುಂಠಿಯು ಶರೀರದ ಉಷ್ಣತೆಯನ್ನು ನಿಯಂತ್ರಿಸುತ್ತದೆ ಶುಂಠಿ ಚಹಾ ಅಥವಾ ಸೂಪ್ ರೂಪದಲ್ಲಿ ಸೇವಿಸಿದರೆ ಉತ್ತಮ.
ಬೆಳ್ಳುಳ್ಳಿ ಮಾತ್ರವಲ್ಲ, ಇದರ ರಸವೂ ಆಂಟಿ-ವೈರಲ್ ಗುಣಗಳನ್ನು ಹೊಂದಿದ್ದು, ಬ್ಯಾಕ್ಟೀರಿಯಲ್ ಸೋಂಕುಗಳನ್ನು ತಡೆಹಿಡಿಯುತ್ತದೆ.
4. ಅರಿಶಿಣ ಮತ್ತು ತುಳಸಿ:
ಅರಿಶಿಣದಲ್ಲಿರುವ ಕ್ಯುರ್ಕುಮಿನ್ ದೇಹದ ಉರಿಯೂತ ಕಡಿಮೆ ಮಾಡುವುದು ಮಾತ್ರವಲ್ಲ, ವೈರಲ್ ಜ್ವರದಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿದೆ. ತುಳಸಿಯೆಂದರೆ ಇದು ರೋಗನಿರೋಧಕ ಶಕ್ತಿಯ ಪ್ರಕೃತಿಯ ಪೌಷ್ಟಿಕಾಂಶವಾಗಿದೆ. ತುಳಸಿ ಚಹಾ ಅಥವಾ ನೀರಿನಲ್ಲಿ ತುಳಸಿ ಎಲೆಗಳನ್ನು ಕುದಿಸಿ ಸೇವಿಸಿದರೆ ಜ್ವರದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
5. ಸಿಟ್ರಸ್ ಹಣ್ಣುಗಳು:
ಕಿತ್ತಳೆ, ನಿಂಬೆ, ದ್ರಾಕ್ಷಿ ಹಣ್ಣುಗಳು ವಿಟಮಿನ್ Cಯಲ್ಲಿ ಸಮೃದ್ಧವಾಗಿದೆ. ಇವು ಸೋಂಕುಗಳನ್ನು ತಡೆದು ದೇಹದ ಇಮ್ಯುನಿಟಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ. ನಿತ್ಯ ಹಣ್ಣಿನ ರಸ ಸೇವನೆ ಉತ್ತಮ.
6. ಮೀನು:
ಪ್ರೋಟೀನ್ ಮತ್ತು ಓಮೆಗಾ 3 ಫ್ಯಾಟಿ ಆಸಿಡ್‌ಗಳಿಂದ ಸಮೃದ್ಧವಾಗಿರುವ ಮೀನು, ದೇಹದ ಪುನಶ್ಚೇತನ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ. ವೈರಲ್ ಜ್ವರದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವವರಲ್ಲಿ ಮೀನು ಸೇವನೆ ದೇಹದ ಕಾಯಿಲೆಗಳಿಗೆ ಪ್ರತಿರೋಧ ಶಕ್ತಿಯನ್ನು ನೀಡುತ್ತದೆ.
7. ಜೇನುತುಪ್ಪ:
ಜೇನುತುಪ್ಪದಲ್ಲಿ ಇರುವ ಪ್ರಾಕೃತಿಕ ಶಕ್ತಿ, ರೋಗನಿರೋಧಕ ಗುಣಗಳು ವೈರಲ್ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತವೆ. ಜೇನುತುಪ್ಪವನ್ನು ಉಗುರು ಬಿಸಿನೀರಿನಲ್ಲಿ ಮಿಕ್ಸ್ ಮಾಡಿ ಸೇವಿಸುವುದು ಒಳ್ಳೆಯದು.
8. ಸೋಂಪು ಕಾಳು:
ಸೋಂಪು ಕಾಳುಗಳಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುವ ಗುಣವಿದೆ. ಇವು ದೇಹವನ್ನು ಸೋಂಕುಗಳಿಂದ ರಕ್ಷಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸೋಂಪಿನ ನೀರು ಅಥವಾ ಚಹಾ ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ.
ಇಂತಹ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರ ಜೊತೆಗೆ ಹೆಚ್ಚು ನೀರು ಕುಡಿಯಿರಿ, ವಿಶ್ರಾಂತಿ ಪಡೆಯಿರಿ, ಮತ್ತು ಶೀತ ತಡೆಯುವ ಬಟ್ಟೆಗಳನ್ನು ಧರಿಸಿ. ವಾಯುಮಾಲಿನ್ಯದಿಂದ ದೂರವಿದ್ದು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಿ. ಪ್ರಸ್ತುತ ಸಮಯದಲ್ಲಿ, ದೇಹದ ಆರೈಕೆ ಮತ್ತು ಸಮರ್ಥ ಆಹಾರಕ್ರಮವೇ ವೈರಲ್ ಜ್ವರವನ್ನು ಜಯಿಸಲು ಮುಖ್ಯ ಮಾರ್ಗ.