ಗರ್ಬಾ ನೃತ್ಯ ಮಾಡುವಾಗಲೇ ಕುಸಿದುಬಿದ್ದ ವ್ಯಕ್ತಿ – ಹೃದಯಾಘಾತದಿಂದ ನಿಧನ…
ಗುಜರಾತ್ನ ಆನಂದ್ ಜಿಲ್ಲೆಯಲ್ಲಿ 21 ವರ್ಷದ ಯುವಕನೊಬ್ಬ ಗರ್ಬಾ ಉತ್ಸವದ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುವಾಗಲೇ ಕುಸಿದು ಬಿದ್ದಿದ್ದಾನೆ.
ಆನಂದ್ನಲ್ಲಿ ತಾರಾಪುರದ ಶಿವಶಕ್ತಿ ಸೊಸೈಟಿ ಆಯೋಜಿಸಿತ್ತು ಕಾರ್ಯಕ್ರಮದ ವೇಳೆ ವೀರೇಂದ್ರ ಸಿಂಗ್ ರಮೇಶ್ ಭಾಯಿ ರಜಪೂತ್ ಅವರು ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದಿದ್ದಾರೆ. ಇಡೀ ಘಟನೆಯನ್ನ ಆತನ ಸ್ನೇಹಿತ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾನೆ.
https://twitter.com/i/status/1576808073124945925
ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ವೀರೇಂದ್ರ ಮೃತಪಟ್ಟಿದ್ದಾರೆ. ವೈದ್ಯರ ಪ್ರಕಾರ, ಆತ ಹೃದಯಾಘಾತದಿಂದ ನಿಧನರಾಗಿದ್ದಾರೆ.
heart attack: Gujarat man dies of heart attack while dancing, incident captured on video








