ಟೆಸ್ಟ್ ಕ್ರಿಕೆಟ್ನ ತಾಳ್ಮೆಯ ಶಿಲ್ಪಿ ಚೇತೇಶ್ವರ ಪೂಜಾರಗೆ ಇಂದು 37ನೇ ಹುಟ್ಟುಹಬ್ಬದ ಸಂಭ್ರಮ. ಚೇತೇಶ್ವರ ಪೂಜಾರ ಅವರು ಜನವರಿ 25, 1987 ರಂದು ರಾಜ್ಕೋಟ್ನಲ್ಲಿ ಜನಿಸಿದರು.
ರಾಹುಲ್ ದ್ರಾವಿಡ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ತಾಳ್ಮೆಯ ಆಟಗಾರ ಎಂದು ಹೆಸರಿಸಲ್ಪಟ್ಟಿರುವ ಚೇತೇಶ್ವರ ಪೂಜಾರ, ಭಾರತೀಯ ತಂಡದ ಪ್ರಮುಖ ಸ್ತಂಭಗಳಲ್ಲಿ ಒಬ್ಬರಾಗಿದ್ದಾರೆ. ಇಂದು 37ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಪೂಜಾರ, 103 ಟೆಸ್ಟ್ ಪಂದ್ಯಗಳಲ್ಲಿ 7,195 ರನ್ಗಳನ್ನು ಗಳಿಸಿದ್ದು, 19 ಶತಕಗಳನ್ನು ಬಾರಿಸಿದ್ದಾರೆ.
2018-19ರ ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪೂಜಾರ ಅವರು 521 ರನ್ಗಳನ್ನು ಗಳಿಸಿ, ಭಾರತದ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನಿಂಗ್ಸ್ ಒಂದರಲ್ಲಿ 525 ಎಸೆತಗಳನ್ನು ಎದುರಿಸಿದ ದಾಖಲೆ ಅವರ ಹೆಸರಿನಲ್ಲಿದೆ, ಇದು ಅವರ ತಾಳ್ಮೆಯ ಬ್ಯಾಟಿಂಗ್ ಶೈಲಿಗೆ ಸಾಕ್ಷಿಯಾಗಿದೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಪೂಜಾರ ಅವರು 21,000 ರನ್ಗಳನ್ನು ದಾಟಿದ್ದಾರೆ, ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ನಂತರ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಬ್ಯಾಟ್ಸ್ಮನ್ ಆಗಿದ್ದಾರೆ. ಅವರ 66ನೇ ಶತಕದೊಂದಿಗೆ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಮೂರನೇ ಭಾರತೀಯ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ.
ಪೂಜಾರ ಅವರ 18ನೇ ದ್ವಿಶತಕದೊಂದಿಗೆ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅತಿ ಹೆಚ್ಚು ದ್ವಿಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ.
ತಾಳ್ಮೆ, ಸಮರ್ಪಣೆ ಮತ್ತು ಶ್ರದ್ಧೆಯಿಂದ ಪೂಜಾರ ಅವರು ಭಾರತೀಯ ಕ್ರಿಕೆಟ್ನಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿದೆ.
ಚೇತೇಶ್ವರ ಪೂಜಾರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು!!