ಲಂಡನ್: ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬುಡಮೇಲು ಮಾಡುತ್ತಿದೆ. ಕಿಲ್ಲರ್ ಕೊರೊನಾ ಹೊಡೆತಕ್ಕೆ ಮಾನವಸಂಕುಲವೇ ತತ್ತರಿಸಿ ಹೋಗಿದೆ. ಈ ಕೊರೊನಾಸುರನಿಂದ ರಕ್ಷಿಸಿಕೊಳ್ಳಲು ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೆಲವರು ಈಗಾಗಲೇ ಆಹಾರ ಹಾಗೂ ಸ್ವಚ್ಛತೆಗೆ ಬಳಸುವ ಉತ್ಪನ್ನಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಆದ್ರೆ ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕಾಂಡೋಮ್ ಗಳನ್ನು ಸಂಗ್ರಹಿಸುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ.
ಹೌದು..! ಅಚ್ಚರಿ ಎನಿಸಿದರೂ ಇದು ನಿಜ. ಕೊರೊನಾ ವೈರಸ್ ಪೀಡಿತ ಪ್ರದೇಶಗಳ ಮಳಿಗೆಗಳಲ್ಲಿ ಟಾಯ್ಲೆಟ್ ಪೇಪರ್ ಹಾಗೂ ಹ್ಯಾಂಡ್ ಸ್ಯಾನಿಟೈಜರ್‌ಗಿಂತಲೂ ಕಾಂಡೋಮ್ ಗಳೇ ಹೆಚ್ಚಾಗಿ ಮಾರಾಟವಾಗುತ್ತಿವೆ. ಚಿಲ್ಲರೆ ವ್ಯಾಪಾರಿಗಳು ಇದ್ದಕ್ಕಿದ್ದಂತೆ ಕಾಂಡೋಮ್ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎಂದು ಇಂಗ್ಲೆಂಡ್ ನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಅಧ್ಯಯನಗಳ ಪ್ರಕಾರ, ಕೊರೊನಾ ಭೀತಿ ಹೀಗೆ ಮುಂದುವರಿದರೆ ಲೈಂಗಿಕ ಸಂಪರ್ಕ ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನ ದಂಪತಿ ಕಾಂಡೋಮ್ ಗಳನ್ನು ಖರೀದಿಸಿ ಸಂಗ್ರಹಿಸಿಕೊಟ್ಟುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಚೀನಾದಲ್ಲೂ ಮಾಸ್ಕ್, ವೈದ್ಯಕೀಯ ಸಾಮಗ್ರಿಗಳಿಗಿಂತ ಕಾಂಡೋಮ್ ಗಳಿಗೆ ಭಾರಿ ಬೇಡಿಕೆ ಇದೆಯಂತೆ. ವಿಶೇಷವಾಗಿ ಜಾಗತಿಗ ಮಾರುಕಟ್ಟೆ ಕುಸಿಯುತ್ತಿರುವ ಸಂದರ್ಭದಲ್ಲಿಯೂ ಕಾಂಡೋಮ್ ಕಂಪನಿಗಳು ಆರ್ಥಿಕವಾಗಿ ಭರ್ಜರಿ ಲಾಭ ಗಳಿಸುತ್ತಿವೆ. ಜನರು ಕಾಂಡೋಮ್ ಕಂಪನಿಗಳ ಷೇರನ್ನು ಹೆಚ್ಚು ಖರೀದಿಸುತ್ತಿದ್ದಾರೆ ಎಂಬ ವರದಿಗಳು ಬಂದಿವೆ.








