ಭಾರಿ ಮಳೆ | ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಬಂದ್ Heavy Rain saaksha_tv
ಉತ್ತರಕನ್ನಡ : ಮಳೆಯ ಅಬ್ಬರಕ್ಕೆ ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 63ರ ಹೊನ್ನಳ್ಳಿ ಬಳಿ ನೀರು ತುಂಬಿಕೊಂಡಿರುವ ಕಾರಣ ಅಂಕೋಲಾ, ಯಲ್ಲಾಪುರ, ಹುಬ್ಬಳ್ಳಿ ಮಾರ್ಗ ಸಂಪೂರ್ಣ ಬಂದ್ ಆಗಿದೆ.
ಹೆದ್ದಾರಿಯಲ್ಲಿ ಸುಮಾರು 1 ಕಿಲೋ ಮೀಟರ್ ವರೆಗೆ ನೀರು ತುಂಬಿಕೊಂಡಿದೆ.
ಗಂಗಾವಳಿ ನದಿಯ ನೀರು ಉಕ್ಕಿದ ಪರಿಣಾಮ ಹೊನ್ನಳ್ಳಿ, ಸುಂಕಸಾಳ, ರಾಮನಗುಳಿ ಸೇರಿ ಹತ್ತಾರು ಗ್ರಾಮಗಳು ಜಲಾವೃತಗೊಂಡಿವೆ.
ಇತ್ತ ಮನೆಗಳಿಂದ ಸುರಕ್ಷಿತ ಸ್ಥಳಗಳಿಗೆ ಜನರು ಶಿಫ್ಟ್ ಮಾಡುವ ಕಾರ್ಯ ಕೂಡ ಮುಂದುವರೆದಿದೆ.
ಇನ್ನು ಸ್ಥಳಕ್ಕೆ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿದ್ದು, ಜನರನ್ನ ಸ್ಥಳಾಂತರಿಸಲು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.