Heavy Rain | ಮುಂದುವರೆದ ಮಳೆ.. ಉಡುಪಿಯಲ್ಲಿ ನಾನಾ ಅವಾಂತರ
ಉಡುಪಿ : ಜಿಲ್ಲೆಯಲ್ಲಿ ಸತತ ಏಳನೇ ದಿನವೂ ಕೂಡ ಮಳೆರಾಯನ ಅಬ್ಬರ ಮುಂದುವರೆದಿದೆ.
ಪರಿಣಾಮ ಉಡುಪಿಯ ಜೀವನದಿ ಇಂದ್ರಾಣಿ ನದಿ ತುಂಬಿ ಹರಿಯುತ್ತಿದೆ.
ಅಲ್ಲದೆ ನಗರ ಪ್ರದೇಶದ ಹಲವಾರು ತಗ್ಗು ಜಾಗಗಳಿಗೆ ನೀರು ನುಗ್ಗಿದೆ.
ಬೈಲಕೆರೆ, ಮೂಡ ನಿಡಂಬೂರು , ಮಠದ ಬೆಟ್ಟು ಮೊದಲಾದ ಭಾಗದಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ.
ಇಂದು ಮಳೆ ಮುಂದುವರಿದರೆ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ.
ಇಂದು ದಿನಪೂರ್ತಿ ಮಳೆ ಮುಂದುವರಿದರೆ ಅಪಾಯ ಹೆಚ್ಚುವ ಸಾಧ್ಯತೆ ಎಂದು ಜಿಲ್ಲೆಯಲ್ಲಿ ನಾಳೆಯೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಅಲ್ಲದೆ ಶಾಲಾ ಮಕ್ಕಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇತ್ತಆಗುಂಬೆ ಘಾಟ್ ನಲ್ಲಿ ಬೃಹತ್ ಮರ ಉರುಳಿಬಿದ್ದಿದೆ. ಹೀಗಾಗಿ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಸುಮಾರು ಮೂರು ಗಂಟೆಗಳ ನಂತರ ಸಂಚಾರ ಮುಕ್ತವಾಗುವ ಸಾಧ್ಯತೆಗಳಿವೆ.