ಉತ್ತರಾಖಂಡ್ನಲ್ಲಿ (Uttarakhand Rain) ವ್ಯಾಪಕ ಮಳೆಯಾಗುತ್ತಿದ್ದು, ಹಲವೆಡೆ ಗುಡ್ಡ ಕುಸಿತದಿಂದಾಗಿ ಹಲವೆಡೆ ಪ್ರವಾಸಿಗರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಮರನಾಥ ಯಾತ್ರಿಕರು (Amarnath Yatra Pilgrims) ಸಂಕಷ್ಟಕ್ಕೆ ಸಿಲುಕಿದ್ದು, ಗದಗ್ ಜಿಲ್ಲೆಯ 23 ಜನರು ಸೇರಿದಂತೆ ಒಟ್ಟು 83 ಜನ ಕನ್ನಡಿಗರು ಸಂಕಷ್ಟದಲ್ಲಿದ್ದಾರೆ.
ಉತ್ತರಾಖಂಡ್ನ ಪಿಥೋರ್ಗಡ್ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದಕ್ಕೆ 300ಕ್ಕೂ ಹೆಚ್ಚು ಯಾತ್ರಿಕರು ಸಿಲುಕಿದ್ದರು. ಸದ್ಯ ಅವರನ್ನೆಲ್ಲ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳಿಂದ ರಕ್ಷೆ ಮಾಡಲಾಗಿದೆ.
3 ಯಾತ್ರಿಕರು ಅಮರನಾಥನ ದರ್ಶನ ಪಡೆದು ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಗುಡ್ಡ ಕುಸಿ ಪರಿಣಾಮ ಅಲ್ಲಿಯೇ ಸಿಲುಕಿದ್ದಾರೆ. ಅಮರನಾಥ ಮಂದಿರದಿಂದ 6 ಕಿ.ಮೀ. ದೂರದ ಪಂಚತಾರ್ನಿ ಟೆಂಟ್ ನಲ್ಲಿ ಸದ್ಯ ಅವರಿದ್ದಾರೆ. ಅವರು ಸಿಲುಕಿರುವ ಕುರಿತು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಉತ್ತರಾಖಂಡ್ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದ್ದೇನೆ. ಅವರನ್ನು ಸುರಕ್ಷಿತವಾಗಿ ತರುವುದಕ್ಕಾಗಿ ಐಎಎಸ್ ಅಧಿಕಾರಿ ರಶ್ಮಿ ಅವರನ್ನು ನಿಯೋಜನೆ ಮಾಡಲಾಗಿದೆ. ಸರ್ಕಾರ ಈಗಾಗಲೇ 1070 ಸಹಾಯವಾಣಿ ಆರಂಭಿಸಿದೆ. ವಿಪತ್ತು ನಿರ್ವಹಣಾ ಇಲಾಖೆ ಕಮಿಷನರ್ ಸತೀಶ್ ಕೂಡ ಅಲ್ಲಿನ ಕನ್ನಡಿಗರಿಗೆ ಕರೆ ಧೈರ್ಯ ತುಂಬಿದ್ದಾರೆ. ಇನ್ನುಳಿದವರು ಯಾವ ಜಿಲ್ಲೆಯವರು ಎಂಬುವುದು ಗೊತ್ತಾಗಿಲ್ಲ ಎಂದು ಹೇಳಿದ್ದಾರೆ.








