Heavy Rain | ತುಮಕೂರಿನಲ್ಲಿ ಭಾರಿ ಮಳೆಗೆ ಕುಸಿದ ಮನೆ
ತುಮಕೂರು : ಕಲ್ಪತರು ನಾಡು ತುಮಕೂರಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ನಾನಾ ಅವಾಂತರಗಳು ಸೃಷ್ಠಿಯಾಗಿವೆ.
ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಎಲ್ಲಾ ಕೆರೆಗಳು ತುಂಬಿ ಹರಿಯುತ್ತಿದ್ದು, ನೂರಾರು ಎಕರೆ ಜಮೀನುಗಳು ಜಲಾವೃತಗೊಂಡಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದೆ.
ಪರಿಣಾಮ ಮನೆಯಲ್ಲಿ ಮನೆಯಲ್ಲಿ ಕಟ್ಟಿದ್ದ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ವೃದ್ಧರೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮನೆ ಕುಸಿಯುವ ಸಂದರ್ಭದಲ್ಲಿ ವೃದ್ಧ ಹನುಮಂತರಾಯಪ್ಪ ಮನೆಯಲ್ಲಿಯೇ ಇದ್ದು, ಮಣ್ಣಿನಡಿ ಸಿಲುಕಿದ್ದ ವೃದ್ಧರನ್ನು ಪಕ್ಷದ ಮನೆಯವರು ರಕ್ಷಿಸಿದ್ದಾರೆ.

ತಮಕೂರಿನ ಮಧುಗಿರಿ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಇತ್ತ ಚಂದ್ರಗಿರಿಯ ತೋಟದ ಮನೆಯಲ್ಲಿವಾಸವಿದ್ದ ಕುಟುಂಬ ಮಳೆಯಲ್ಲಿಸಿಲುಕಿಕೊಂಡಿದ್ದು, ಅವರನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.
ತೋಟದ ಬಳಿ ಮನೆ ಇದ್ದ ಕಾರಣ ಮಳೆ ನೀರು ಮನೆಗೆ ನುಗ್ಗಿದೆ.
ಇದರಿಂದ ಕುಟುಂಬಸ್ಥರು ಗ್ರಾಮದ ಜನರಿಗೆ ಮೊಬೈಲ್ ಮೂಲಕ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಮಂಜುನಾಥ್ ಎಂಬುವವರು ಹಗ್ಗದ ಸಹಾಯದಿಂದ ನೀರಿನಲ್ಲಿ ಸಿಲುಕಿದವರನ್ನು ರಕ್ಷಿಸಿದ್ದಾರೆ.








