Rain | ಬೆಳಗಾವಿಯಲ್ಲಿ ಭಾರಿ ಮಳೆ : ಕೊಚ್ಚಿ ಹೋದ ಬೈಕ್ ಸವಾರ
ಬೆಳಗಾವಿ : ಜಿಲ್ಲೆಯಾದ್ಯಂತ ಭಾರಿ ಪ್ರಮಾಣದ ಮಳೆಯಾಗಿದ್ದು, ಹಳ್ಳ ಕೊಳ್ಳಗಳು ತುಂಬಿ ತುಳುಕುತ್ತಿವೆ.
ಆದ್ರೆ ಬೆಳಗಾವಿ – ಬೈಲಹೊಂಗಲ ರಾಜ್ಯ ಹೆದ್ದಾರಿ ಸಾಣಿಕೊಪ್ಪ ಗ್ರಾಮದ ಬಳಿ ಬೈಕ್ ಸವಾರನೊಬ್ಬ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ದುಸ್ಸಾಹಸ ಮಾಡಲೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

ಪುಟ್ಟೇಶ ಜಡೆಯಣ್ಣವರ ಕೊಚ್ಚಿಕೊಂಡು ಹೋಗಿರುವ ಬೈಕ್ ಸವಾರನಾಗಿದ್ದಾನೆ.
ನಿನ್ನೆ ಸಾಯಂಕಾಲ ನಡೆದ ಘಟನೆ ಇದಾಗಿದ್ದು, ರಾಜ್ಯ ಹೆದ್ದಾರಿಯಲ್ಲಿ ನೀರು ಹರಿಯುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತಗೊಂಡಿದ್ದಾರೆ.
ಬೈಕ್ ಸವಾರ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೀಗಾಗಿ ಯಾವುದೇ ಅನಾಹುತ ಆಗದಂತೆ ಹಳ್ಳದ ಬಳಿ ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.








