ಬಳ್ಳಾರಿ : ನಿನ್ನೆ ರಾತ್ರಿಯಿಡಿ ಜಿಲ್ಲೆಯಾದ್ಯಂತ ಭಾರಿ ಮಳೆ ಆಗಿದೆ. ಸಂಡೂರು, ಹೊಸಪೇಟೆ ಸೇರಿದಂತೆ ಬಹುತೇಕ ಎಲ್ಲ ಭಾಗಗಳಲ್ಲೂ ರಾತ್ರಿ ಧೋ ಎಂದು ಮಳೆಯಾಗಿದ್ದು, ಹಳ್ಳಕೊಳ್ಳಗಳು ಭೋರ್ಗತೆಯುತ್ತಿವೆ. ಸಂಡೂರಿನಲ್ಲಿ ಭಾರಿ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಕೆಲವೆಡೆ ರಸ್ತೆ ಸಂಪರ್ಕ ಬಂದ್ ಆಗಿದೆ.
ಇದು ಒಂದು ಕಡೆ ಆದರೇ ಭಾರಿ ವರ್ಷಧಾರೆಯಿಂದಾಗಿ ಹೊಸಪೇಟೆ-ಬಳ್ಳಾರಿ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಸ್ತೆಯಲ್ಲಿ ಟಿಪ್ಪರ್ ಲಾರಿ ಹಾಗೂ ಕ್ಯಾಂಪಟ್ ಮಧ್ಯೆ ಅಪಘಾತ ಆಗಿದ್ದು, ಕುಡುತಿನಿ ಪೊಲೀಸರು ಬೆಳಗಿನ ಜಾವದವರೆಗೂ ಟ್ರಾಫಿಕ್ ಕ್ಲೀಯರ್ ಮಾಡುವುದರಲ್ಲಿ ನಿರತರಾಗಿದ್ರು.
https://www.youtube.com/watch?v=eUEuO-_AiJA








