Bangalore | ಬೆಂಗಳೂರಿಗರೇ ಗಮನಿಸಿ… ಮುಂದಿನ ಮೂರು ತಿಂಗಳು ಭಾರಿ ಮಳೆ
ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರು ಮಹಾಮಳೆಗೆ ತತ್ತರಿಸಿ ಹೋಗಿದೆ.
ಬಿಟ್ಟು ಬಿಡದೇ ಧೋ ಎಂದು ಸುರಿಯುತ್ತಿರುವ ಮಳೆಗೆ ಮೆಟ್ರೋ ಮಂದಿ ಸುಸ್ತಾಗಿ ಹೋಗಿದ್ದಾರೆ.
ಸದ್ಯ ಮಳೆ ನಿಂತರೂ ವರುಣ ಸೃಷ್ಠಿಸಿದ ಅವಾಂತರಗಳು ಮಾತ್ರ ಇನ್ನೂ ಹಾಗೇ ಇವೆ.
ಮನೆಗಳಿಗೆ ನೀರು ನುಗ್ಗಿದ್ದರೇ ರಸ್ತೆಗಳು ಕೆರೆಗಳಂತಾಗಿವೆ.
ಮಳೆ ಹಾನಿಯಿಂದ ನಾನಾ ಸಮಸ್ಯೆಗಳು ಸೃಷ್ಠಿಯಾಗಿವೆ. ಇದರಿಂದ ಇನ್ನೂ ಜನರು ಚೇತರಿಸಿಕೊಂಡಿಲ್ಲ.
ಇದರ ನಡುವೆ ಬೆಂಗಳೂರಿನಲ್ಲಿ ಮುಂದಿನ ಮೂರು ತಿಂಗಳ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಉಂಟಾಗಲಿದೆ.
ಹೀಗಾಗಿ ಮುಂದಿನ ಮೂರು ತಿಂಗಳು ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆ.
ಅಂದರೇ ನವೆಂಬರ್ ವರೆಗೂ ಸಿಲಿಕಾನ್ ಸಿಟಿ ಮಂದಿಗೆ ವರುಣನ ಕಾಟ ತಪ್ಪಿದಲ್ಲ ಎಂದು ತಿಳಿಸಿದ್ದಾರೆ.
ಅಂದಹಾಗೆ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಸೆಪ್ಟಂಬರ್ ಒಂದರಿಂದ ಇದುವರೆಗೂ 211 ಎಂ.ಎಂ ಮಳೆಯಾಗಿದೆ.
ಇತ್ತ ಕರಾವಳಿ ಭಾಗದಲ್ಲಿ ಮುಂದಿನ ಐದು ದಿನ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಲ್ಲಿದೆ.








