Heavy Rain | ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರಿ ಮಳೆ
ಚಿಕ್ಕಬಳ್ಳಾಪುರ : ನಿನ್ನೆ ತಡರಾತ್ರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದೆ.
ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ, ಗೌರಿಬಿದನೂರು ಭಾಗದಲ್ಲಿ ಭಾರಿ ಮಳೆಯಾಗಿದೆ.
ಗುಡಿಬಂಡೆ ಅಮಾನಿ ಬೈರಸಾಗರ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದರಿಂದ ಗುಡಿಬಂಡೆ – ಪೇರೇಸಂದ್ರ ಮಾರ್ಗ, ಗುಡಿಬಂಡೆ – ಹಂಪಸಂದ್ರ – ಬಾಗೇಪಲ್ಲಿ ಮಾರ್ಗ, ಗುಡಿಬಂಡೆ – ಲಕ್ಕೇನಹಳ್ಳಿ ಮಾರ್ಗಗಳಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತಿರುವುದರಿಂದ ಜಲದಿಗ್ಭಂಧನವಾಗಿದೆ.
ಪಾರ್ಯಾಯ ವ್ಯವಸ್ಥೆ ಕಲ್ಪಿಸಿರುವ ಮಾರ್ಗಗಳಲ್ಲೂ ಸಂಚಾರ ಕಷ್ಟಕರವಾಗಿದೆ.








