ಭಾರಿ ಮಳೆ | ಚಿಕ್ಕೋಡಿ Rain ಉಪವಿಭಾಗದ ಏಳು ಸೇತುವೆಗಳು ಮುಳುಗಡೆ
ಚಿಕ್ಕೋಡಿ : ನೆರೆಯ ಮಹಾರಾಷ್ಟ್ರದ ಹಾಗೂ ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಆರ್ಭಟ ಮುಂದುವರೆದಿದೆ.
ಪರಿಣಾಮ ಚಿಕ್ಕೋಡಿ ಉಪವಿಭಾಗದ ಏಳು ಸೇತುವೆಗಳು ಮುಳುಗಡೆಯಾಗಿವೆ.
ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ವರ್ಷಧಾರೆ ಆಗುತ್ತಿದೆ.
ಇದರಿಂದಾಗಿ ಜಿಲ್ಲೆಯ ಕೃಷ್ಣಾ, ವೇದಗಂಗಾ, ದೂದಗಂಗಾ ಹಾಗೂ ಹಿರಣ್ಯಕೇಶಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡಿದೆ.
ಹೀಗಾಗಿ ನಿಪ್ಪಾಣಿ ತಾಲೂಕಿನ ವೇದಗಂಗಾ ನದಿಯ ಜತ್ರಾಟ್ – ಭೀವಶಿ, ಅಕ್ಕೋಳ – ಸಿದ್ನಾಳ, ಮಮದಾಪೂರ – ಹುಣ್ಣರಗಿ, ಭೋಜವಾಡಿ – ಕೊಣ್ಣೂರ ಹಾಗೂ ಕಾರದಗಾ – ಭೋಜ, ಗ್ರಾಮದ ಸಂಪರ್ಕ ಸೇತುವೆ ಮುಳುಗಡೆಯಾಗಿವೆ.
ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಸಂಕೇಶ್ವರ – ನಾಗನೂರ ಗ್ರಾಮದ ಸಂಪರ್ಕ ಸೇತುವೆ ಕೂಡಾ ಜಲಾವೃತವಾಗಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ – ಯಡೂರ ಬ್ರಿಡ್ಜ್ ಕಂ ಬಾಂದಾರ ಕೂಡ ಮುಳುಗಡೆಯಾಗಿದೆ.









