ರಾಯಚೂರಿನ ಲಿಂಗಸುಗೂರಿನಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಬೆಳ್ಳಂ ಬೆಳಗ್ಗೆ ಸುರಿದ ಧಾರಾಕಾರ ಮಳೆಗೆ ಲಿಂಗಸುಗೂರು ತಾಲೂಕಿನ ಗುಡದಾನಳ ಗ್ರಾಮದಲ್ಲಿ ಹಳ್ಳ ತುಂಬಿ ನೀರು ಹರಿದಿದೆ. ಪರಿಣಾಮ ಗ್ರಾಮಕ್ಕೆ ನೀರು ನುಗ್ಗಿ ಸಂಚಾರ ಮಾಡಲು ಸಾರ್ವಜನಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹೊರಭಾಗದಲ್ಲಿರುವ ಹಳ್ಳದ ಬದ್ದು ಹೂಡೆದು ಭಾರೀ ಪ್ರಾಮಾಣದ ನೀರು ಗ್ರಾಮದಲ್ಲಿ ಆವರಿಸಿಕೊಂಡಿದೆ. ಹಳ್ಳದ ಬದ್ದು ಕಟ್ಟದೇ ಹಾಗೇ ಬಿಡಲಾಗಿದೆ. ಬದ್ದು ನಿರ್ಮಾಣಕ್ಕೆ ಉದ್ಯೋಗಖಾತ್ರಿ ಯೋಜನೆಯಡಿ ಕೆಲಸ ನೀಡಬೇಕು. ಆದ್ರೆ ಕೆಲಸ ನೀಡದೆ ಹಾಗೇ ಬಿಟ್ಟಿರುವ ಹಿನ್ನೆಲೆ ಇಂತಹ ಘಟನೆ ನಡೆದಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಕೆಲಸ ಕೊಟ್ಟರೆ ಹಳ್ಳದ ನೀರು ಒಳಗೆ ಬಾರದಂತೆ ದೊಡ್ಡ ಪ್ರಮಾಣದಲ್ಲಿ ಬದ್ದು ಕಟ್ಟಬಹುದಾಗಿತ್ತು.. ಆದ್ರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಸಂಬಂಧ ಪಟ್ಟ ಜನ ಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಿದೆ ನಿರ್ಲಕ್ಷ್ಯ ತೋರಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕಿ ಕುಸುಮಾ ವಿರುದ್ಧ ಗುಡುಗಿದ ಮುನಿರತ್ನ
ಬೆಂಗಳೂರು: ನನ್ನ ವಿರುದ್ಧ ಸುಳ್ಳು ಅತ್ಯಾಚಾರ ದೂರು ದಾಖಲಿಸಿರುವ ಆರೋಪದ ಹಿಂದೆ ರಾಜರಾಜೇಶ್ವರಿ ನಗರ ಕಾಂಗ್ರೆಸ್ನ (Congress) ಪರಾಜಿತೆ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಕೈವಾಡ ಇದೆ ಎಂದು...