ಭೋರ್ಗರೆದು ಹರಿಯುತ್ತಿದೆ ಶಿಂಶಾ ನದಿ
ಮಂಡ್ಯ : ಸಕ್ಕರೆ ನಾಡು ಮಂಡ್ಯದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ.
ಜಿಲ್ಲೆಯಾದ್ಯಂತ ಕಳೆದ ಮೂರು ನಾಲ್ಕು ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ಎಲ್ಲಾ ಹಳ್ಳಕೊಳ್ಳಗಳು ತುಂಬಿ ತುಳುಕುತ್ತಿವೆ.
ನಿನ್ನೆ ರಾತ್ರಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಶಿಂಶಾ ನದಿ ಭೋರ್ಗರೆದು ಹರಿಯುತ್ತಿದೆ.
ನದಿಯ ಭೋರ್ಗರೆತಕ್ಕೆ ಮದ್ದೂರಿನ ಹೊಳೆಆಂಜನೇಯ ದೇವಸ್ಥಾನ ಮುಂಭಾಗವಿರುವ ಮದ್ವವನ ಕೊಚ್ಚಿ ಹೋಗಿದೆ.

ಜಿಲ್ಲೆಯಲ್ಲಿ ಮೂರು ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ.
ಇದರಿಂದ ನದಿಗೆ ಅಪಾರ ಪ್ರಮಾಣ ನೀರು ಸೇರುತ್ತಿದ್ದು, ಶಿಂಶಾ ನದಿ ಭೋರ್ಗೆರೆಯುತ್ತಿದೆ.
ಮತ್ತೊಂದು ಕಡೆ ನಾಗಮಂಗಲ ತಾಲೂಕಿನ ಅಗಸೇಗೌಡನಕೊಪ್ಪಲಿನಲ್ಲಿ ಧಾರಾಕಾರ ಮಳೆಯಿಂದ ಟೊಳ್ಳಿ ಕೆರೆ ಸಂಪೂರ್ಣ ಭರ್ತಿಯಾಗಿದೆ.
ಟೊಳ್ಳಿಕೆರೆಯಿಂದ ಅಪಾರ ಪ್ರಮಾಣದ ನೀರು ಉಕ್ಕಿ ಬರುತ್ತಿರುವುದರಿಂದ ರಸ್ತೆ ಕೊಚ್ಚಿ ಹೋಗಿದೆ. ಇದಲ್ಲದೇ ಜಮೀನುಗಳು ಜಲಾವೃತವಾಗೊಂಡಿವೆ.








