ಮುಂಬೈನಲ್ಲಿ ಭಾರಿ ಮಳೆ – ರೆಡ್ ಅಲರ್ಟ್ ಘೋಷಣೆ
ಮುಂಬೈ, ಜುಲೈ 16: ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಯ ಹಿನ್ನಲೆಯಲ್ಲಿ ಐಎಂಡಿ(ಭಾರತೀಯ ಹವಾಮಾನ ಇಲಾಖೆ)ಯು ರೆಡ್ ಅಲರ್ಟ್ ಘೋಷಿಸಿದೆ.
ಮುಂಬಯಿಯಲ್ಲಿ ಮಳೆ ಮೂರನೇ ದಿನವೂ ಮುಂದುವರೆದಿದೆ. ಇಂದು ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದ್ದು, ಮುಂಬೈ ಮತ್ತು ಇತರ ಮಹಾರಾಷ್ಟ್ರ ಕರಾವಳಿ ಪ್ರದೇಶಗಳಿಗೆ ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ.

ಮುಂಬೈನ ಹಲವಾರು ಪ್ರದೇಶಗಳಾದ ಬಾಂದ್ರಾ, ಕುರ್ಲಾ ಕಾಂಪ್ಲೆಕ್ಸ್, ಸಾಂತಕ್ರೂಜ್, ಕೊಲಾಬಾ, ಮಹಾಲಕ್ಷ್ಮಿ, ವರ್ಲಿ ಯಲ್ಲಿ ಈಗಾಗಲೇ 10 ಸೆಂ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ
ಮುಂಬಯಿಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮುಂದಿನ 6 ಗಂಟೆಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಮುಂದಿನ 18 ಗಂಟೆಗಳಲ್ಲಿ ಮುಂಬೈ ನಗರ, ಥಾಣೆ, ರಾಯ್ಗಡ್ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.








