Heavy Rain | ಹುಕ್ಕೇರಿ ವಿವಿಧೆಡೆ ಭಾರಿ ಮಳೆ – ಮನೆಗಳಿಗೆ ನುಗ್ಗಿದ ನೀರು
ಬೆಳಗಾವಿ : ಕಳೆದ ಒಂದು ವಾರದಿಂದ ಶಾಂತವಾಗಿದ್ದ ಮಳೆರಾಯ ಮತ್ತೆ ತನ್ನ ಆರ್ಭಟವನ್ನ ಆರಂಭಿಸಿದ್ದಾನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಆರಂಭವಾಗಿದೆ.
ಬೆಳಗಾವಿಯ ಹುಕ್ಕೇರಿ ತಾಲೂಕಿನ ವಿವಿಧೆಡೆ ಭಾರಿ ಮಳೆಯಾಗಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿದೆ.
ಹುಕ್ಕೇರಿ ತಾಲೂಕಿನ ಹುಲ್ಲೋಳಿ ಹಟ್ಟಿ ಗ್ರಾಮದ ರಾಜೇಸಾಬ್ ಮುಲ್ತಾನಿ ಹಾಗೂ ಲಕ್ಷವ್ವ್ ಕುಗಟೋಳಿ ಎಂಬುವರ ಮನೆಗಳಿಗೆ ನೀರು ನುಗ್ಗಿದೆ.

ಮಳೆ ನೀರು ಮನೆಗೆ ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಧಾನ್ಯ ಸೇರಿದಂತೆ ವಿವಿಧ ವಸ್ತುಗಳು ನೀರು ಪಾಲಾಗಿವೆ.
ಚಿಕ್ಕ ಮಕ್ಕಳು ಸೇರಿದಂತೆ ಕುಟುಂಬಸ್ಥರ ಪರದಾಟ ಅನುಭವಿಸುವಂತಾಗಿದೆ. ಹುಕ್ಕೇರಿ ಪಟ್ಟಣದಲ್ಲೂ ಭಾರಿ ಮಳೆಯಾಗಿದೆ.
ಭಾರಿ ಮಳೆಯಿಂದ ಪ್ರಯಾಣಿಕರ ಪರದಾಟ ಅನುಭವಿಸಿದ್ದಾರೆ.








