Heavy Rain | ಯಾದಗಿರಿಯಲ್ಲಿ ಭಾರಿ ಮಳೆ, ಬೆಳೆ ನಾಶ
ಯಾದಗಿರಿ : ಬಿಸಿಲನಗರಿಯಾಗಿದ್ದ ಯಾದಗಿರಿಯಲ್ಲಿ ಮಳೆಯ ಅಬ್ಬರ ಜೋರಾಗಿದೆ.
ಇದರಿಂದ ಜನ್ರ ಜೀವನ ಅಸ್ಥವ್ಯಸ್ಥಗೊಂಡಿದೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.
ಭಾರಿ ವರ್ಷಧಾರೆ ಕಾರಣದಿಂದಾಗಿ ಬಸವ ಸಾಗರ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.
ಹೀಗಾಗಿ ಯಾವ ಸಮಯದಲ್ಲಾದ್ರೂ ಜಲಾಶಯದಿಂದ ನೀರು ಹರಿಬಿಡುವ ಸಾಧ್ಯತೆಗಳಿವೆ.
ಆದ್ದರಿಂದ ನದಿ ಪಾತ್ರದ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳು ಗ್ರಾಮಗಳಲ್ಲಿ ಡಂಗೂರ ಸಾರಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಅತಿಯಾದ ಮಳೆಯಿಂದ ರೈತರು ಸಂಕಷ್ಟು ಅನುಭವಿಸುವಂತಾಗಿದೆ.
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಹತ್ತಿ ಹಾಗೂ ತೊಗರಿ ಬೆಳೆಗೆ ಮಳೆಯಿಂದ ಸಂಪೂರ್ಣ ಹಾಳಾಗಿ ಹೋಗುತ್ತಿದೆ.
ನಾರಾಯಣಪೂರ ಬಸವಸಾಗರ ಡ್ಯಾಂಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿದೆ.
ಆದ್ದರಿಂದ ನದಿ ಪಾತ್ರದ ಗ್ರಾಮಗಳಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಲಾಗುತ್ತಿದೆ.
ಯಾವ ಸಮಯದಲ್ಲಾದ್ರೂ ನದಿಗೆ ನೀರು ಬಿಡಬಹುದು ನದಿ ದಂಡೆಯ ಪಂಪಸೆಟ್ ತೆರವುಗೊಳಿಸಿ ಎಂದು ಸೂಚಿಸುತ್ತಿದ್ದಾರೆ.