Heavy Rain | ಬಾಗಲಕೋಟೆಯಲ್ಲಿ ಧಾರಾಕಾರ ಮಳೆ : ಜನ ಜೀವನ ತತ್ತರ
ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ರಾತ್ರಿಯಿಡೀ ಧಾರಾಕಾರ ಮಳೆ ಸುರಿದಿದೆ.
ಬಾದಾಮಿಯಲ್ಲಿ ಮಳೆ ಅವಾಂತರಕ್ಕೆ ಜನ ಜೀವನ ತತ್ತರಿಸಿ ಹೋಗಿದೆ.
ಭಾರಿ ಮಳೆಯಿಂದಾಗಿ ಕಿರು ಜಲಪಾತ ಅಗಸ್ತ್ಯ ಹೊಂಡ ಮೈದುಂಬಿ ಭೋರ್ಗರೆಯುತ್ತಿದೆ.
ಧಾರಾಕಾರ ಮಳೆಗೆ ಅಗಸ್ತ್ಯ ಹೊಂಡ ತುಂಬಿ ಓಣಿಯೊಳಗೆ ನೀರು ನುಗ್ಗಿದೆ.
ಅಪಾರ ಪ್ರಮಾಣದ ನೀರು ರಸ್ತೆಗಳು ಜಲಾವೃತಗೊಂಡಿವೆ.
ಮತ್ತೊಂದು ಕಡೆ ಭಾರಿ ಮಳೆಗೆ ಮನೆಯ ಮುಂಭಾಗದ ಮೇಲ್ಛಾವಣಿ ಕುಸಿತವಾಗಿದೆ.
ಶ್ಯಾವಕ್ಕ ಲೋಕಾಪುರ ಎಂಬುವರ ಮನೆ ಮೇಲ್ಛಾವಣಿ ಕುಸಿತಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಜೀವ ಹಾನಿ ಆಗಿಲ್ಲ.
ಬಾದಾಮಿ ಪಟ್ಟಣದ ಉಳ್ಳಾಗಡ್ಡಿ ಓಣಿಯಲ್ಲಿ ರಸ್ತೆ ತುಂಬೆಲ್ಲಾ ಮಳೆ ನೀರು ಹರಿಯುತ್ತಿದೆ.
ಓಣಿಯಲ್ಲಿ ಮೊಳಕಾಲುದ್ದ ನೀರು ಹರಿಯುತ್ತಿದೆ.