Army helicopter crash: 4 ಮೃತದೇಹ ಪತ್ತೆ, 5ನೇ ದೇಹಕ್ಕಾಗಿ ಶೋಧ ಮುಂದುವರಿಕೆ…
ಅರುಣಾಚಲ ಪ್ರದೇಶದಲ್ಲಿ (Arunachal Pradesh) ಸೇನಾ ಹೆಲಿಕಾಪ್ಟರ್ ಪತನಗೊಂಡ ಘಟನೆಯಲ್ಲಿ 5 ಯೋಧರು ಹುತಾತ್ಮರಾಗಿದ್ದು, ಇದುವರೆಗೆ 4 ಮೃತದೇಹಗಳು ಪತ್ತೆಯಾಗಿವೆ. ದುರಂತ ಘಟನೆಯ ತನಿಖೆ ಆರಂಭವಾಗಿದ್ದು, ಅಪಘಾತಕ್ಕೂ ಮುನ್ನ ಏರ್ ಟ್ರಾಫಿಕ್ ಕಂಟ್ರೋಲ್ ಅಂದರೆ ಎಟಿಸಿಗೆ ಕರೆ ಬಂದಿದ್ದು, ತಾಂತ್ರಿಕ ದೋಷ ಕಂಡುಬಂದಿದೆ ಎಂದು ವರದಿಯಾಗಿದೆ.
21 ದಿನಗಳ ಅಂತರದಲ್ಲಿ ಸೇನಾ ವಿಮಾನವೊಂದು ಅಪಘಾತಕ್ಕೆ ಬಲಿಯಾಗುತ್ತಿರುವುದು ಇದು ಮೂರನೇ ಬಾರಿ.
ಶುಕ್ರವಾರ, ಭಾರತೀಯ ಸೇನೆಯ ಅಡ್ವಾನ್ಸ್ ಲೈಟ್ ಹೆಲಿಕಾಪ್ಟರ್ (ಎಎಲ್ಎಚ್) ಮೈಗಿಂಗ್ ಪ್ರದೇಶದಲ್ಲಿ ಪತನಗೊಂಡಿತು. ಅಪಘಾತದ ನಂತರ ಭಾರತೀಯ ಸೇನೆ ಮತ್ತು ವಾಯುಪಡೆ ತಂಡಗಳು ಶೋಧ ಕಾರ್ಯಾಚರಣೆ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ, ದಟ್ಟವಾದ ಕಾಡು ಮತ್ತು ಕಡಿದಾದ ಪರ್ವತಗಳಿಂದಾಗಿ, ಹಲವಾರು ಸವಾಲುಗಳನ್ನು ಎದುರಿಸಬೇಕಾಯಿತು. ಘಟನಾ ಸ್ಥಳಕ್ಕೆ ತೆರಳಲು ರಸ್ತೆಯೇ ಇಲ್ಲ ಎಂದು ವರದಿಯಾಗಿದೆ.
ಹೆಚ್ಎಎಲ್ ರುದ್ರ ಎಂದು ಕರೆಯಲ್ಪಡುವ ಸೇನಾ ಹೆಲಿಕಾಪ್ಟರ್ ಲೋವರ್ ಸಿಯಾಂಗ್ ಜಿಲ್ಲೆಯ ಲಿಕಾಬಾಲಿಯಿಂದ ಟೇಕ್ ಆಫ್ ಆಗಿತ್ತು. HAL ರುದ್ರ ಭಾರತೀಯ ಸೇನೆಗಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತಯಾರಿಸಿದ ಅಟ್ಯಾಕ್ ಹೆಲಿಕಾಪ್ಟರ್ ಆಗಿದೆ.
Helicopter Crash: Four bodies recovered, search continues for 5th, mountain-forest becomes a challenge