🙏ನಮೋ ದುರ್ಗಾ🙏
🙏ಬ್ರಹ್ಮಚಾರಿಣೀ🙏
ದಧಾನಾ ಕರ ಪದ್ಮಾಭ್ಯಾಂ ಅಕ್ಷಮಾಲಾ ಕಮಂಡಲು|
ದೇವೀ ಪ್ರಸೀದತು ಮಯೀ ಬ್ರಹ್ಮಚಾರಿಣ್ಯನುತ್ತಮಾ||
ಜಗಜ್ಜನನೀ ದುರ್ಗೆಯ ನವ ಶಕ್ತಿಯರಲ್ಲಿ ಎರಡನೇ ಸ್ವರೂಪವು ಬ್ರಹ್ಮಚಾರಿಣಿಯದಾಗಿದೆ. ಇಲ್ಲಿ ‘ಬ್ರಹ್ಮ’ ಶಬ್ದದ ಅರ್ಥ ತಪಸ್ಸು ಎಂದಾಗಿದೆ. ಬ್ರಹ್ಮಚಾರಿಣೀ ಅರ್ಥಾತ್ ತಪಸ್ಸಿನ ಚಾರಿಣೀ ತಪಸ್ಸನ್ನು ಆಚರಿಸುವವಳು. ‘ವೇದಸ್ತತ್ತ್ವ ತಪೋ ಬ್ರಹ್ಮ’ ವೇದ ಮತ್ತು ತಪಸ್ಸು ‘ಬ್ರಹ್ಮ’ ಶಬ್ದದ ಅರ್ಥವಾಗಿದೆ. ಬ್ರಹ್ಮಚಾರಿಣೇ ದೇವಿಯ ಸ್ವರೂಪವು ಪೂರ್ಣ ಜ್ಯೋತಿರ್ಮಯ ಹಾಗೂ ಅತ್ಯಂತ ಭವ್ಯವಾಗಿದೆ. ಇವಳ ಬಲಕೈಯಲ್ಲಿ ಜಪಮಾಲೆ ಮತ್ತು ಎಡಕೈಯಲ್ಲಿ ಕಮಂಡಲು ಇರುತ್ತದೆ.
ಹಿಂದಿನ ಜನ್ಮದಲ್ಲಿ ಇವಳು ಹಿಮಾಲಯನ ಮನೆಯಲ್ಲಿ ಪುತ್ರಿಯಾಗಿ ಅವತರಿಸಿದಾಗ ನಾರದರೆ ಉಪದೇಶದಿಂದ ಇವಳು ಭಗವಾನ್ ಶಿವನನ್ನು ಪತಿಯಾಗಿ ಪಡೆದುಕೊಳ್ಳಲು ಅತಿಯಾದ ಕಠಿಣ ತಪಸ್ಸನ್ನು ಮಾಡಿದ್ದಳು. ಇಂತಹ ದುಷ್ಕರ ತಪಸ್ಸಿನ ಕಾರಣ ಇವಳನ್ನು ತಪಶ್ಚಾರಿಗೇ ಅರ್ಥಾತ್ ಬ್ರಹ್ಮಚಾರಿಣೀ ಎಂಬ ಹೆಸರಿನಿಂದ ಕರೆಯಲಾಯಿತು.
ಒಂದು ಸಾವಿರ ವರ್ಷ ಇವಳು ಕೇವಲ ಫಲ-ಮೂಲಗಳನ್ನು ತಿಂದು ಕಳೆದಿದ್ದಳು. ನೂರು ವರ್ಷಗಳವರೆಗೆ ಕೇವಲ ಎಲೆಗಳನ್ನು ತಿನ್ನುತ್ತಿದ್ದಳು. ಕೆಲವು ದಿನಗಳ ವರೆಗೆ ಕಠಿಣ ಉಪವಾಸವಿದ್ದು ತೆರೆದ ಆಕಾಶದ ಕೆಳಗೆ ಮಳೆ-ಬಿಸಿಲಿನ ಭಯಾನಕ ಕಷ್ಟಗಳನ್ನು ಸಹಿಸಿದಳು. ಈ ಕಠಿಣ ತಪಶ್ಚರ್ಯಯ ಬಳಿಕ ಮೂರು ಸಾವಿರ ವರ್ಷಗಳ ವರೆಗೆ ಕೇವಲ ನೆಲದ ಮೇಲೆ ಉದುರಿಬಿದ್ದ ಬಿಲ್ವಪತ್ರಗಳನ್ನು ತಿಂದು ಅವಳು ಹಗಲು-ರಾತ್ರಿ ಭಗವಾನ್ ಶಂಕರನ ಆರಾಧನೆ ಮಾಡುತ್ತಿದ್ದಳು.
ಇದಾದ ನಂತರ ಅವಳು ಒಣಗಿದ ಬಿಲ್ವಪತ್ರಗಳನ್ನು ತಿನ್ನುವುದನ್ನು ಬಿಟ್ಟು ಬಿಟ್ಟಳು. ಅನೇಕ ಸಾವಿರ ವರ್ಷಗಳವರೆಗೆ ಅವಳು ಆಹಾರ-ನೀರೂ ಸೇವಿಸದೆ ತಪಸ್ಸು ಮಾಡುತ್ತಾ ಇದ್ದಳು. ಎಲೆ (ಪರ್ಣ)ಗಳನ್ನೂ ತಿನ್ನುವುದನ್ನು ಬಿಟ್ಟ ಕಾರಣದಿಂದ ಅವಳ ಒಂದು ಹೆಸರು ‘ಅಪರ್ಣಾ’ ಎಂದೂ ಆಯಿತು.
ಅನೇಕ ಸಾವಿರ ವರ್ಷಗಳ ಈ ಕಠಿಣ ತಪಸ್ಸಿನ ಕಾರಣ ಬ್ರಹ್ಮಚಾರಿಣೀ ದೇವಿಯ ಆ ಪೂರ್ವಜನ್ಮದ ಶರೀರವು ತುಂಬಾ ಕ್ಷೀಣವಾಯಿತು. ಅವಳು ಅತ್ಯಂತ ಕೃಷಕಾಯಳಾಗಿದ್ದಳು. ಅವಳ ಈ ಸ್ಥಿತಿಯನ್ನು ಕಂಡು ತಾಯಿಯಾದ ಮೇನಾದೇವಿಯು ಅತಿ ದುಃಖಿತಳಾದಳು. ಅವಳು ಮಗಳನ್ನು ಆ ಕಠಿಣ ತಪಸ್ಯೆಯಿಂದ ಹಿಂದಿರುಗಿಸಲು ಕರೆದಳು- ‘ಉ ಮಾ’ ನೋಡೆ! ಬೇಡ! ನೋಡೆ! ಬೇಡ! ಅಂದಿನಿಂದ ದೇವೀ ಬ್ರಹ್ಮಚಾರಿಣಿಯ ಹಿಂದಿನ ಜನ್ಮದ ಒಂದು ಹೆಸರು ‘ಉಮಾ’ ಎಂದೂ ಆಗಿತ್ತು.
ಅವಳ ಈ ತಪಸ್ಸಿನಿಂದ ಮೂರೂ ಲೋಕಗಳಲ್ಲಿ ಹಾಹಾಕಾರ ಹಬ್ಬಿತು. ಎಲ್ಲ ದೇವತೆಗಳು, ಋಷಿಗಳೂ, ಸಿದ್ದಗಣರೂ, ಮುನಿಗಳೂ ಬ್ರಹ್ಮಚಾರಿಣೀ ದೇವಿಯ ಈ ತಪಸ್ಸನ್ನು ಅಭೂತಪೂರ್ವ ಪುಣ್ಯಕೃತ ಎಂದು ಹೇಳುತ್ತಾ ಅವಳನ್ನು ಹೊಗಳತೊಡಗಿದರು. ಕೊನೆಗೆ ಪಿತಾಮಹ ಬ್ರಹ್ಮದೇವರು ಆಕಾಶವಾಣಿಯಿಂದ ಅವಳನ್ನು ಸಂಬೋಧಿಸುತ್ತಾ ಮಧುರ ಸ್ವರದಿಂದ ಹೇಳಿದರು- ಹೇ ದೇವಿ! ಇಂದಿನವರೆಗೆ ಯಾರೂ ಇಂತಹ ಕಠೋರ ತಪಸ್ಸು ಮಾಡಿರಲಿಲ್ಲ. ಇಂತಹ ತಪಸ್ಸು ನಿನ್ನಿಂದಲೇ ಸಂಭವಿಸಿದೆ. ನಿನ್ನ ಈ ಅಲೌಕಿಕ ಕಾರ್ಯದ ಹೊಗಳಿಕೆ ಎಲ್ಲೆಡೆ ನಡೆಯುತ್ತಾ ಇದೆ. ನಿನ್ನ ಮನೋ ಕಾಮನೆಯು ಎಲ್ಲ ವಿಧದಿಂದ ಪೂರ್ಣವಾದೀತು. ಭಗವಾನ್ ಚಂದ್ರಮೌಳಿ ಶಿವನು ನಿನಗೆ ಪತಿಯಾಗಿ ದೊರೆಯುವನು. ಈಗ ನೀನು ತಪಸ್ಸನ್ನು ಬಿಟ್ಟು ಮನೆಗೆ ಹಿಂತಿರುಗು. ಬೇಗನೇ ನಿನ್ನ ತಂದೆಯು ನಿನ್ನನ್ನು ಕರೆಯಲು ಬರುತ್ತಿರುವರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಜಗನ್ಮಾತೆ ದುರ್ಗೆಯ ಈ ಎರಡನೆ ಸ್ವರೂಪವು ಭಕ್ತರಿಗೆ ಹಾಗೂ ಸಿದ್ದರಿಗೆ ಆನಂತ ಫಲವನ್ನು ಕೊಡುವಂತಹುದು. ಅವಳ ಉಪಾಸನೆಯಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ಇವುಗಳ ವೃದ್ಧಿ ಆಗುತ್ತದೆ.
ಜೀವನದ ಕಠಿಣ ಸಂಘರ್ಷದಲ್ಲಿಯೂ ಅವನ ಮನಸ್ಸು ಕರ್ತವ್ಯ-ಪಥದಿಂದ ವಿಚಲಿತವಾಗಲಾರದು. ಜಗಜ್ಜನನೀ ಬ್ರಹ್ಮಚಾರಿಣೀ ದೇವಿಯ ಕೃಪೆಯಿಂದ ಅವನಿಗೆ ಎಲ್ಲೆಡೆ ಸಿದ್ದಿ ಮತ್ತು ವಿಜಯದ ಪ್ರಾಪ್ತಿ ಆಗುತ್ತದೆ.
ನವರಾತ್ರೆ ಪೂಜೆಯ ಎರಡನೇ ದಿನ ಇವಳ ಸ್ವರೂಪದ್ದೇ ಉಪಾಸನೆ ಮಾಡಲಾಗುತ್ತದೆ. ಅಂದು ಸಾಧಕನ ಮನಸ್ಸು ‘ಸ್ವಾಧಿಷ್ಠಾನ’ ಚಕ್ರದಲ್ಲಿ ಸ್ಥಿತವಾಗುತ್ತದೆ. ಈ ಚಕ್ರದಲ್ಲಿ ನೆಲೆನಿಂತ ಮನಸ್ಸುಳ್ಳ ಯೋಗಿಯು ಅವಳ ಕೃಪೆ ಮತ್ತು ಭಕ್ತಿಯನ್ನು ಪಡೆದು ಕೊಳ್ಳುತ್ತಾನೆ..
ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||”
ಓಂ ಶ್ರೀ ಬ್ರಹ್ಮಚಾರಿಣ್ಯೈ ನಮಃ
ಓಂ ನಮಃ ಶಿವಾಯ
ಓಂ ನಮೋ ಭಗವತೇ ವಾಸುದೇವಾಯ




