ಬೈರುತ್: ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಕ್ಷಿಪಣಿ ಮತ್ತು ರಾಕೆಟ್ ಫೋರ್ಸ್ ನ ಕಮಾಂಡರ್ ಇಬ್ರಾಹಿಂ ಮುಹಮ್ಮದ್ ಕಬಿಸಿ ಹತ್ಯೆಯಾಗಿದೆ.
ಹೆಜ್ಬುಲ್ಲಾದ ಕ್ಷಿಪಣಿಗಳು ಮತ್ತು ರಾಕೆಟ್ ಫೋರ್ಸ್ನ ಹೆಚ್ಚುವರಿ ಕೇಂದ್ರ ಕಮಾಂಡರ್ ಗಳ ಜೊತೆಯಲ್ಲಿ ಕಬಿಸಿ ಹೊಡೆದುರುಳಿಸಲಾಗಿದೆ ಎಂದು ಮಿಲಿಟರಿ ಹೇಳಿದೆ.
ಇಬ್ರಾಹಿಂ 1980 ರ ದಶಕದಲ್ಲಿ ಹಿಜ್ಬುಲ್ಲಾಗೆ ಸೇರಿದ್ದ ನಂತರ ಸಂಘಟನೆಯೊಳಗೆ ಹಲವಾರು ಮಹತ್ವದ ಮಿಲಿಟರಿ ಪಾತ್ರಗಳನ್ನು ನಿರ್ವಹಿಸಿದ್ದ. ಇಸ್ರೇಲಿ ನಾಗರಿಕರು ಮತ್ತು ಸೈನಿಕರ ವಿರುದ್ಧ ದಾಳಿ ಹಲವಾರು ದಾಳಿಗಳನ್ನು ಯೋಜಿಸಿದ್ದ ಎನ್ನಲಾಗಿದೆ.
ದಕ್ಷಿಣ ಗಡಿಯಲ್ಲಿರುವ ಗಾಜಾದಲ್ಲಿ ಪ್ಯಾಲೆಸ್ತೀನಿಯನ್ ಬಂಡುಕೋರರ ಗುಂಪು ಹಮಾಸ್ ವಿರುದ್ಧ ಸುಮಾರು 12 ತಿಂಗಳ ಯುದ್ಧದ ನಂತರ, ಇಸ್ರೇಲ್ ತನ್ನ ಗಮನವನ್ನು ಉತ್ತರದ ಗಡಿಯತ್ತ ಬದಲಿಸಿದೆ. ಹಿಜ್ಬುಲ್ಲಾ ಇಸ್ರೇಲ್ ವಿರುದ್ಧ ರಾಕೆಟ್ ಹಾರಿಸುತ್ತಿದ್ದಾರೆ. ಇದಕ್ಕ ಇರಾನ್ ಬೆಂಬಲ ಇದೆ ಎನ್ನಲಾಗುತ್ತಿದೆ.