ಬೆಂಗಳೂರು: ಜಯಕರ್ನಾಟಕ ಸಂಘಟನೆ ಅಸ್ತಿತ್ವದಲ್ಲಿರುವಾಗಲೇ ಜಯಕರ್ನಾಟಕ ಜನಪರ ವೇದಿಕೆ ಸ್ಥಾಪನೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಜಯಕರ್ನಾಟಕ ಹೆಸರನ್ನು ಜಯ ಕರ್ನಾಟಕ ಜನಪರ ವೇದಿಕೆಯೂ ಬಳಸಬಹುದು ಎಂದು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈ ನಿಧನದ ನಂತರ ಸಂಘಟನೆಯಲ್ಲಿ ನಡೆಯುತ್ತಿದ್ದ ಕೆಲ ಘಟನೆಗಳಿಂದ ಬೇಸತ್ತು ಜಯಕರ್ನಾಟಕದಿಂದ ಹೊರ ಬಂದಿದ್ದ ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಗುಣರಂಜನ್ ಶೆಟ್ಟಿ, ಜಯಕರ್ನಾಟಕ ಜನಪರ ವೇದಿಕೆ ಸ್ಥಾಪಿಸಿದ್ದರು. ಜನಪರ ವೇದಿಕೆಗೆ ಜಯ ಕರ್ನಾಟಕ ಹೆಸರು ಬಳಕೆ ಮಾಡಿಕೊಂಡಿದ್ದನ್ನು ಪ್ರಶ್ನಿಸಿ, ಜಯ ಕರ್ನಾಟಕ ವೇದಿಕೆ ಬೆಂಗಳೂರಿನ 18ನೇ ಹೆಚ್ಚುವರಿ ಸಿಟಿಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಮೆಟ್ಟಿಲೇರಿದ್ದರು.


ಆದರೆ, ಜಯ ಕರ್ನಾಟಕ ವೇದಿಕೆ ಅರ್ಜಿಯನ್ನು ವಜಾಗೊಳಿಸುವಂತೆ ಕೋರಿ ಜಯಕರ್ನಾಟಕ ಜನಪರ ವೇದಿಕೆ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಜಯ ಕರ್ನಾಟಕ ಜನಪರ ವೇದಿಕೆ ಪರ ವಾದ ಮಂಡಿಸಿದ ಹಿರಿಯ ವಕೀಲ ಉದಯ್ ಹೊಳ್ಳ, ಜಯ ಕರ್ನಾಟಕ ಹೆಸರಿನಲ್ಲಿ ಈಗಾಗಲೇ ಹಲವು ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ವ್ಯಕ್ತಿಯನ್ನು ಅವಮಾನಿಸುವ ಉದ್ದೇಶ ಜನಪರ ವೇದಿಕೆಗೆ ಇಲ್ಲ. ಇಂತಹವುದ್ದೇ ಪ್ರಕರಣಗಳ ಪ್ರಕರಣಗಳ ಬಗ್ಗೆ ವಿವಿಧ ನ್ಯಾಯಲಯಗಳು ನೀಡಿರುವ ಆದೇಶಗಳನ್ನು ಉದಯ್ ಹೊಳ್ಳ ಉಲ್ಲೇಖಿಸಿದರು.

ವಾದ-ಪ್ರತಿವಾದ ಸಲ್ಲಿಸಿದ ಹೈಕೊರ್ಟ್, ಸಿವಿಲ್ ಕೋರ್ಟ್‍ನಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ವಜಾಗೊಳಿಸಿ ಜನಪರ ವೇದಿಕೆಯವರು ಜಯ ಕರ್ನಾಟಕ ಹೆಸರು ಬಳಸಿಕೊಳ್ಳಲು ಅನುಮತಿ ನೀಡಿ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಗುಣರಂಜನ್ ಶೆಟ್ಟಿ ಯಾರು..!
ಗುಣರಂಜನ್ ಶೆಟ್ಟಿ, ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ದಿ.ಮುತ್ತಪ್ಪ ರೈ ಆಪ್ತರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಉರಮಾಲು

ಗ್ರಾಮದವರು. ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಸಹೋದರು ಆಗಿರುವ ಗುಣರಂಜನ್ ಶೆಟ್ಟಿ, ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಿಯಲ್ ಉದ್ಯಮದ ಜತೆಗೆ ಜಯ ಕರ್ನಾಟಕ ಜನಪರ ವೇದಿಕೆ ಸ್ಥಾಪಿಸಿ ಸಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








