ಮಡಿಕೇರಿ: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಹೃದಯಭಾಗದಲ್ಲಿರುವ ಕೊಡಗಿನ ಅರಸರ ಕೋಟೆಯ ಕಟ್ಟಡದ ದುರಸ್ಥಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಹೈಕೋರ್ಟ್ ಆಸಮಾಧಾನ ವ್ಯಕ್ತಪಡಿಸಿದೆ.

ಕೋಟೆಯ ದುರಸ್ಥಿ ಕಾಮಗಾರಿ ಸದ್ಯದ ಸ್ಥಿತಿಗತಿ ಕುರಿತು ಪುರಾತತ್ವ ಇಲಾಖೆ 15 ದಿನದೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿದೆ.
ಅರಮನೆ ಕಟ್ಟಡದಲ್ಲಿ ಇಲ್ಲಿವರೆಗೆ ಆಗಿರುವ ಕಾಮಗಾರಿ ಬಗ್ಗೆ ರಿಟ್ ಅರ್ಜಿದಾರರೊಂದಿಗೆ ಖುದ್ದು ಪರಿಶೀಲನೆ ನಡೆಸಿ ವರದಿ ಸಿದ್ದಗೊಳಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ಸೂಚಿಸಿದೆ.

ಶಿಥಿಲಾವಸ್ಥೆಯಲ್ಲಿರುವ ಕೋಟೆಯ ಅವ್ಯವಸ್ಥೆ ಮತ್ತು ನವೀಕರಿಸುವ ಕುರಿತು ನಿವೃತ್ತ ಐಎಎಸ್ ಅಧಿಕಾರಿ ವಿರುಪಾಕ್ಷಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆಯೇ ಕಾಮಗಾರಿಗೆ ಸರ್ಕಾರ 10.76 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಪುರಾತತ್ವ ಇಲಾಖೆ 59 ಲಕ್ಷ ರುಪಾಯಿ ವೆಚ್ಚದಲ್ಲಿ ಮಾಡಿದ ಕಾಮಗಾರಿ ಕಳಪೆಯಾಗಿದೆ.

ಕೋಟೆಯ ಮೇಲೆ ಹೊದಿಸಿರುವ ತಗಡಿನ ಶೀಟುಗಳು ಕಳಪೆ ಗುಣಮಟ್ಟದಾಗಿದೆ. ಮುಂದಿನ ಮೂರು ತಿಂಗಳಿನಲ್ಲಿ ಮತ್ತೆ ಮುಂಗಾರು ಆರಂಭವಾಗಲಿದೆ. ಆಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಆದರೆ ಪುರಾತತ್ವ ಇಲಾಖೆ ವಿನಾಕಾರಣ ವಿಳಂಬ ಮಾಡುತ್ತಿದೆ ಎಂದು ಅರ್ಜಿದಾರ ವಿರೂಪಾಕ್ಷಪ್ಪ ಪರ ವಕೀಲ ರವೀಂದ್ರನಾಥ್ ಕಾಮತ್ ಹೈಕೋರ್ಟ್ ಗಮನಕ್ಕೆ ತಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








