ಕಲಬುರಗಿ: ನಮ್ಮ ದೇಶದಲ್ಲಿ ಬಡವರಿಗೊಂದು ನ್ಯಾಯ, ಉಳ್ಳವರು-ರಾಜಕಾರಣಿಗಳಿಗೊಂದು ನ್ಯಾಯ ಅನ್ನೋದು ಕಾಮನ್ ಆಗಿದೆ. ಅದರಲ್ಲೂ ನ್ಯಾಯ ಕೇಳಲು ಹೋಗುವ ಬಡವರಿಗೆ ಪೊಲೀಸರಿಂದ ನ್ಯಾಯ ಸಿಗಲ್ಲ ಅನ್ನೋ ಮಾತು ಆಗಾ ಕೇಳುತ್ತಲೇ ಇರುತ್ತೇವೆ.
ಆದರೆ, ಇಂತಹದೇ ಒಂದು ಪ್ರಕರಣದಲ್ಲಿ ಬಡಪಾಯಿ ತಾಯಿ ತನ್ನ ಕಳೆದುಹೋದ ಮಗನನ್ನು ಹುಡುಕಿಕೊಡುವಂತೆ ಕೊಟ್ಟಿದ್ದ ದೂರನ್ನು ಕಸದ ಬುಟ್ಟಿಗೆ ಎಸೆದಿದ್ದ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣಾಧಿಕಾರಿಗೆ ಹೈಕೋರ್ಟ್ ಒಂದು ವಾರಗಳ ಕಾಲ ರಸ್ತೆಯಲ್ಲಿ ಕಸ ಗುಡಿಸುವ ಶಿಕ್ಷೆ ನೀಡಿದೆ.

ಏನಿದು ಪ್ರಕರಣ..!
ಕಲಬುರಗಿಯ ಮಿಣಜಗಿ ತಾಂಡಾದ ತಾರಾಬಾಯಿ ಎಂಬುವರು ತಮ್ಮ ಮಗ ಸುರೇಶ್ ನಾಪತ್ತೆಯಾಗಿದ್ದಾನೆ ಎಂದು ಸ್ಟೇಷನ್ ಬಜಾರ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ತೋರಿಸಿದ್ದರು. ಈ ಸಂಬಂಧ ತಾರಾಬಾಯಿ ಕಳೆದ ಅಕ್ಟೋಬರ್ 20 ರಂದು ಕಲಬುರಗಿ ಹೈಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತಾರಾಬಾಯಿ ನೀಡಿದ ದೂರಿನ ಬಗ್ಗೆ ಪೊಲೀಸರು ಡೈರಿಯಲ್ಲಿ ದಾಖಲಿಸಿಲ್ಲ. ಎಫ್‍ಐಆರ್‍ನ್ನು ದಾಖಲಿಸಿಲ್ಲ, ಸಿಆರ್‍ಪಿಸಿ ಅಡಿಯಲ್ಲಿ ಸೂಚಿಸಲಾದ ಕಾರ್ಯ ವಿಧಾನಗಳನ್ನು ಪೊಲೀಸ್ ಅಧಿಕಾರಿ ಪಾಲಿಸದ ಕಾರಣ ಈ ಸಮಸ್ಯೆ ಉಧ್ಭವಿಸಿದೆ ಎಂದು ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಮತ್ತು ನ್ಯಾಯಮೂರ್ತಿ ಪಿ. ಕೃಷ್ಣಭಟ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿತು.

ಸಮುದಾಯದ ಸೇವೆ ಮಾಡಲು ಪೊಲೀಸ್ ಅಧಿಕಾರಿ ಸಿದ್ದರಿದ್ದಾರೆ. ಆದರೆ, ನ್ಯಾಯಾಲಯದ ಮೃಧುತ್ವ ತಾಳಬೇಕು ಎಂದು ಪೊಲೀಸ್ ಅಧಿಕಾರಿ ಪರ ವಕೀಲರು ಕೋರ್ಟ್‍ನಲ್ಲಿ ಮನವಿ ಮಾಡಿದರು. ಹೀಗಾಗಿ ಹೈ ಕೋರ್ಟ್ ಪೊಲೀಸರ ವಿರುದ್ಧ ಗರಂ ಆಗಿದೆ. ಹೀಗಾಗಿ ನಿರ್ಲಕ್ಷ್ಯ ತೋರಿದ ಸ್ಟೇಷನ್ ಬಜಾರ್ ಠಾಣಾಧಿಕಾರಿ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯನ್ನು ಒಂದು ವಾರ ಸ್ವಚ್ಛಗೊಳಿಸುವಂತೆ ನಿರ್ದೇಶನ ನೀಡಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








