Chhattisgarh | ಹೆಂಡ್ತಿ ಬೇಕು ಹೆಂಡ್ತಿ – ಹೈ ಟೆನ್ಷನ್ ಟವರ್ ಏರಿದ ಪತಿ.
ಛತ್ತೀಸ್ಗಢದ ಭಿಲಾಯಿಯ ಗನಿಯಾರಿಯಲ್ಲಿ ಘಟನೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ತವರು ಮನೆಯಿಂದ ಪತ್ನಿ ಬರದ ಹಿನ್ನೆಲೆಯಲ್ಲಿ ಘಟನೆ
ಪತ್ನಿಗಾಗಿ ಹೈ ಟೆನ್ಷನ್ ಟವರ್ ಏರಿದ ಹೊರಿ ಲಾಲ್
ಛತ್ತೀಸ್ ಗಢ : ತವರು ಮನೆಯಿಂದ ಪತ್ನಿ ಬರದ ಹಿನ್ನೆಲೆಯಲ್ಲಿ ಪತಿ ಹೈ ಟೆನ್ಷನ್ ಟವರ್ ಏರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಛತ್ತೀಸ್ ಗಢದ ಭಿಲಾಯಿಯ ಗನಿಯಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತವರಿಗೆ ಹೋದ ಪತ್ನಿ ಮತ್ತೆ ಮನೆಗೆ ಬರದ ಹಿನ್ನೆಲೆ ಆಕೆಯ ಪತಿ ಹೊರಿ ಲಾಲ್, ಟ್ರಾನ್ಸ್ಮಿಷನ್ ಟವರ್ ಏರಿದ್ದಾನೆ.
ವ್ಯಕ್ತಿ ತನ್ನ ಹೆಂಡತಿಯನ್ನು ವಾಪಸ್ ಕರೆದುಕೊಂಡು ಹೋಗಲು ತನ್ನ ಅತ್ತೆಯ ಮನೆಗೆ ಬಂದಿದ್ದಾನೆ.
ಆದರೆ ಆತನ ಮಾವ ತನ್ನ ಮಗಳನ್ನು ವಾಪಸ್ ಕಳುಹಿಸಿಕೊಡಲು ನಿರಾಕರಿಸಿದ್ದಾರೆ.
ಇದರಿಂದ ಕೋಪಗೊಂಡ ಹೊರಿ ಲಾಲ್ ತನ್ನ ಹೆಂಡತಿಯನ್ನು ಕಳುಹಿಸಿಕೊಡುವಂತೆ ಅತ್ತೆ ಮತ್ತು ಮಾವನ ಮೇಲೆ ಒತ್ತಡ ಹೇರಲು 75 ಅಡಿ ಎತ್ತರದ ಹೈಟೆನ್ಷನ್ ಟವರ್ ಅನ್ನು ಏರಿ ಕುಳಿತಿದ್ದಾನೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.