Hijab Controvercy : ಹಿಜಾಬ್ ಸಂಘರ್ಷದಿಂದ ಕಾಲೇಜಿಗೆ ಹಾಜರಾಗದೇ ದೂರು ಉಳದಿರುವ ವಿದ್ಯಾರ್ಥಿನಿಯರಿಗೆ ಬಿಗ್ ಶಾಕ್
ರಾಜ್ಯದಲ್ಲಿನ ಹಿಜಬ್ ಸಂಘರ್ಷದ ನಡುವೆ ಕೋರ್ಟ್ ನ ಮಧ್ಯಂತರ ಆದೇಶದ ಹೊರತಾಗಿಯೂ ಹಲವೆಡೆ ಈಗಲೂ ಹಿಜಬ್ ಧರಿಸಿ ಶಾಲಾ ಕಾಲೇಜುಗಳಿಗೆ ತೆರಳುತ್ತಿದ್ದು, ಹಿಜಬ್ ಗಾಗಿ ಹೋರಾಟ ಮಾಡುತ್ತಿರುವುದು ಕಂಡು ಬಂದಿದೆ… ಇದರ ನಡುವೆಯೇ ಇದೀಗ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ಟೆನ್ಷನ್ ಶುರುವಾಗಿದೆ..
ಹಿಜಾಬ್ ಸಂಘರ್ಷದಿಂದ ಕಾಲೇಜಿಗೆ ಹಾಜರಾಗದೇ ದೂರು ಉಳದಿರುವ ವಿದ್ಯಾರ್ಥಿನಿಯರಿಗೆ ಬಿಗ್ ಶಾಕ್ ನೀಡಲಾಗಿದೆ… ಹಿಜಾಬ್ ಸಂಘರ್ಷದ ನಡುವೆ ರಾಜ್ಯದ್ಯಂತ ಪಿಯು ಪ್ರಯೋಗಿಕ ಪರೀಕ್ಷೆಗಳು ಆರಂಭವಾಗಿದೆ. ಈಗಾಗಲೆ ಪ್ರಾಕ್ಟಿಕಲ್ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಮಂಡಳಿ ವೇಳಾಪಟ್ಟಿ ನೀಡಿದೆ.
ಇಂದಿನಿಂದ ರಾಜ್ಯದ ಪಿ.ಯು ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದ್ದು , ಒಂದೊಮ್ಮೆ ಹಿಜಾಬ್ ಸಂಘರ್ಷ ಕೋರ್ಟ್ ಆದೇಶದವರೆಗೂ ತರಗತಿಗೆ ನಾನು ಬರಲ್ಲ, ಪರೀಕ್ಷೆ ಹಾಜರಾಗೋದಿಲ್ಲ ಅನ್ನೋವರಿಗೆ ಇದು ದೊಡ್ಡ ಸಂಕಷ್ಟ ತಂದೊಡ್ಡಲಿದೆ.
ಹಿಜಾಬ್ ಸಂಘರ್ಷದಿಂದ ಎಕ್ಸಾಂ ಬರೆಯದೇ ಹೋದ್ರೆ ಮತ್ತೆ ಪ್ರಾಕ್ಟಿಕಲ್ ಪರೀಕ್ಷೆ ಬರೆಯೋದಕ್ಕೆ ಅವಕಾಶ ಸಿಗುವುದಿಲ್ಲ.. ಪ್ರಯೋಗಿಕ ಎಕ್ಸಾಂಗೆ ಹಾಜರಾತಿ ಪಡಯದವರಿಗೆ ಮತ್ತೊಂದ ಅವಕಾಶ ಇರೋದಿಲ್ಲ
ಹೀಗಾಗಿ ಸಂಘರ್ಷದಿಂದ ಶಾಲೆಯಿಂದ ದೂರ ಉಳಿದ ವಿದ್ಯಾರ್ಥಿನಿಯರಿಗೆ ಸಂಕಷ್ಟ ಎದುರಾಗಿದೆ. ಹಿಜಾಬ್ ವಿವಾದದ ನಡುವೆಯೇ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಆರಂಭವಾಗಿದೆ.. ಹಿಜಾಬ್ ಸಂಘರ್ಷದಿಂದ ಪದವಿ ಕಾಲೇಜು ರಜೆ ಹಿನ್ನಲೆ ಮೂರು ದಿನ ತಡವಾಗಿ ಪರೀಕ್ಷೆ ಆರಂಭವಾಗಿದೆ.. ಪ್ರಾಯೋಗಿಕ ಪರೀಕ್ಷೆ ಮುಗಿಸಲು ಪದವಿ ಪೂರ್ವ ಮಂಡಳಿ ಮಾರ್ಚ್ 25ರವರೆಗೂ ಅವಕಾಶ ನೀಡಿದೆ.