Hijab – Saffron controvercy : ಬಾಗಲಕೋಟೆಯಲ್ಲಿ ಭುಗಿಲೆದ್ದ ಆಕ್ರೋಶ – ಕಲ್ಲು ತೂರಾಟದಲ್ಲಿ ವಿದ್ಯಾರ್ಥಿಗೆ ಗಾಯ
ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದ ಭುಗಿಲೆದ್ದಿದೆ… ಹಿಜಬ್ ಗಾಗಿ ಮುಸ್ಲಿಂ ಯುವತಿಯರು ಪ್ರತಿಭಟನೆ ಮಾಡ್ತಿದ್ದರೆ ,, ಹಿಜಬ್ ತೆಗೆಯುವಂತೆ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದು , ರಾಜಕೀಯ ತಿರುವು ಪಡೆದುಕೊಂಡಿದೆ.. ಸದ್ಯಕ್ಕೆ ಈ ಪ್ರಕರಣ ಈಗ ನ್ಯಾಯಾಲಯದ ಅಂಗಳದಲ್ಲಿದೆ.. ಅಂತಿಮವಾಗಿ ಸಂಬಂಧಿತ ಕೇಸ್ ಗಳ ವಿಚಾರಣೆ ನಡೆದ ನಂತರ ತೀರ್ಪು ಹೊರಬರಬೇಕಿದೆ..
ಇತ್ತ ಬಾಗಲಕೋಟೆಯಲ್ಲಿ ರಬಕವಿಬನಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಬನಹಟ್ಟಿ ಸರಕಾರಿ ಪಿಯು ಕಾಲೇಜು ಮುಂದೆ ಜಮಾಯಿಸಿದ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ.. ಕಾಲೇಜು ಒಳಗಡೆ ಮುಸ್ಲಿಂ ವಿದ್ಯಾರ್ಥಿನಿಯರು ಧರಣಿ ಮಾಡಿದ್ರೆ , ಇನ್ನೊಂದೆಡೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳೂ ಪ್ರತಿಭಟನೆ ನಡೆಸಿರುವುದು ಕಂಡುಬಂದಿದೆ..
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ಪಟ್ಟಣದ ಪಿಯು ಕಾಲೇಜು ಒಳಗೆ ಹಾಗೂ ಹೊರಗಡೆ ಕೇಸರಿ ಶಾಲು , ಹಿಜಬ್ ಸಂಘರ್ಷ ತಾರಕಕ್ಕೇರಿದ್ದು ಕಂಡುಬಂದಿದೆ.. ಕಲ್ಲು ತೂರಾಟವೂ ನಡೆದಿದ್ದು ಕಲ್ಲೆಸೆತ ವೇಳೆ ಓರ್ವ ವಿದ್ಯಾರ್ಥಿಗೆ ಗಾಯವೂ ಆಗಿದೆ..
ಪೊಲೀಸರು ವಿದ್ಯಾರ್ಥಿಗಳನ್ನ ಚದುರಿಸಲು ಪ್ರಯತ್ನಿಸಿದ ನಂತರ ಕಾಲೇಜು ಮುಂದೆ ವಿದ್ಯಾರ್ಥಿಗಳು ಒಡೋಡಿ ಹೊರನಡೆದಿದ್ದಾರೆ.. ಇನ್ನೂ ಹಿಂಸಾತ್ಮಕ ರೂಪ ಪಡೆದ ಘಟನೆಯಲ್ಲಿ ಕಾಲೇಜು ಕಟ್ಟಡದ ಮೇಲಿನಿಂದ ಕೆಲವರು ವಿದ್ಯಾರ್ಥಿಗಳ ಮೇಲೆ ಕಲ್ಲು ತೂರಿದ್ದಾರೆ.. ಪ್ರತಿಯಾಗಿ ಕೆಲ ವಿದ್ಯಾರ್ಥಿಗಳೂ ಕಲ್ಲು ತೂರಿದ್ದಾರೆ.
ಕೆಲವರು ಹಿಜಾಬ್ ಪರ ಕೆಲ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ.. ಇನ್ನೂ ಕೆಲವರು ಹಿಜಾಬ್ ಬ್ಯಾನ್ ಮಾಡಿ ಎಂದು ಘೋಷಣೆ ಕೂಗಿದ್ದಾರೆ.. ಸ್ಥಳದಲ್ಲಿ ಬನಹಟ್ಟಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸಪಟ್ಟಿದ್ದು , ಅವರೊಂದಿಗೆ ವಿದ್ಯಾರ್ಥಿಗಳು ವಾಗ್ವಾದವನ್ನೂ ನಡೆಸಿದ್ದಾರೆ..