Hijab controvercy : ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ರಜೆ ಘೋಷಿಸಿ : ಬಿ.ಸಿ ನಾಗೇಶ್
ಬೆಂಗಳೂರು : ರಾಜ್ಯಾದ್ಯಂತ ಹಿಜಬ್ – ಕೇಸರಿ ಶಾಲು ಸಂಘರ್ಷ ಭುಗಿಲೆದ್ದಿದೆ.. ಇದೀಗ ಹಿಜಬ್ ಮತ್ತು ಕೇಸರಿ ಶಾಲು ಗಲಾಟೆ ವಿಚಾರವಾಗಿ , ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಪ್ರತಿಕ್ರಿಯೆ ನೀಡಿದ್ಧಾರೆ.. ಪರಿಸ್ಥಿತಿ ನೋಡಿಕೊಂಡು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.
DDPI ಹಾಗೂ DDPU ಗಳಿಗೆ ನಿರ್ದೇಶನ ನೀಡಿದ ಬಿ ಸಿ ನಾಗೇಶ್ ಅವರು ಪರಿಸ್ಥಿತಿ ನಿಯಂತ್ರಣಕ್ಕೆ ಬಂದರೆ ಪಿ.ಯು ಕಾಲೇಜು ನಡೆಸಿ, ಒಂದು ವೇಳೆ ಹತೋಟಿಗೆ ಬಾರದಿದ್ರೆ ರಜೆ ಘೋಷಣೆ ಮಾಡಿ ಎಂದು ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ್ದಾರೆ..