Hijab Controvercy : ಹಿಜಾಬ್ ತೆಗೆಯಲ್ಲ ಎಂದ ವಿದ್ಯಾರ್ಥಿನಿಯರು , ಅಲ್ಲಾ ಹು ಅಕ್ಬರ್ ಘೊಷಣೆ ಕೂಗಿದ ಯುವಕರ ಗುಂಪು…
ಬೆಳಗಾವಿ : ಬೆಳಗಾವಿಯ ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಿಜಾಬ್ ಹೈಡ್ರಾಮಾ ನಡೆದಿದೆ.. ಹಿಜಾಬ್‌ಗೆ ಅವಕಾಶ ನೀಡುವಂತೆ ಪಟ್ಟು ಹಿಡಿದು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ… ಕ್ಲಾಸ್‌ಗೆ ಬಹಿಷ್ಕಾರ ಹಾಕಿ ಹೊರ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಕಾಲೇಜು ಸಿಬ್ಬಂದಿ, ಪೊಲೀಸರು ತಡೆದಿದ್ದಾರೆ…
ಈ ವೇಳೆ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು..
ವಿದ್ಯಾರ್ಥಿಗಳು ಹಿಜಾಬ್ ತೆಗೆಯುವುದಿಲ್ಲ , ಕಾಲೇಜು ಒಳಗೆ ಹೋಗುವುದಿಲ್ಲ ಅಂತಾ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು… ಈ ವೇಳೆ ಕೆಲ ಯುವಕರ ಗುಂಪು ಅಲ್ಲಾ ಹು ಅಕ್ಬರ್ ಅಂತಾ ಘೋಷಣೆ ಕೂಗಿದ್ದಾರೆ… ಹೀಗಾಗಿ ಸ್ಥಳದಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿದೆ..
ಈ ರೀತಿ ಘೋಷಣೆ ಕೂಗಿದ ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ… ಯುವಕರು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದು , ಸದ್ಯ ಆರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೊದಲಿಗೆ ಯುವಕರ ಮನವೊಲಿಸಲು ಡಿಸಿಪಿ ರವೀಂದ್ರ ಗಡಾದಿ ಹರಸಾಹಸ ಪಟ್ಟಿದ್ದಾರೆ…. ಯುವಕರ ಗುಂಪು ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ… ಬೆಳಗಾವಿ ವಿಜಯಾ ಇನ್ಸ್ಟಿಟ್ಯೂಟ್ ಪ್ಯಾರಾ ಮೆಡಿಕಲ್ ಕಾಲೇಜು ಬಳಿ ಗಲಾಟೆ ನಡೆದಿದೆ… ನಂತರ ಸ್ಥಳಕ್ಕೆ ತಹಶಿಲ್ದಾರ ಆರ್.ಕೆ.ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಹೈಕೋರ್ಟ್ ಆದೇಶ ಪಾಲಿಸುವಂತೆ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ.









