Hijab Controvercy : ‘ಹಿಂದೂ ವಿದ್ಯಾರ್ಥಿಗಳು ಕುಂಕುಮ ತೆಗೆದರೆ , ನಾವು ಕ್ಲಾಸ್ ಗೆ ಹೋಗ್ತೇವೆ ’ : ಹಿಜಾಬ್ ಹೈಡ್ರಾಮಾ
ಯಾದಗಿರಿ : ಯಾದಗಿರಿ ಜಿಲ್ಲೆಯಲ್ಲಿ ಹಿಜಾಬ್ ಕಿಚ್ಚು ಹೆಚ್ಚಾಗಿದೆ. ಯಾದಗಿರಿ ನಗರದ ನ್ಯೂ ಕನ್ನಡ ಪದವಿ ಪೂರ್ವ ಕಾಲೇಜ್ ಮುಂಭಾಗದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಹೈಡ್ರಾಮಾ ನಡೆಸಿದ್ದಾರೆ.. ಬುರ್ಕಾ ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ದೊಡ್ಡ ರಂಪಾಟ ಮಾಡಿದ್ದಾರೆ.
ಜೀವ ಹೋದ್ರು ಪರವಾಗಿಲ್ಲ ನಾವು ಹಿಜಾಬ್ ಬಿಡುವದಿಲ್ಲವೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದದ್ದು ಕಂಡುಬಂದಿದೆ. ಅಷ್ಟೇ ಅಲ್ಲದೇ ತಮಗೆ ಶಿಕ್ಷಣಕ್ಕಿಂತ ಹಿಜಾಬೇ ಮುಖ್ಯ ಎಂದಿದ್ದಾರೆ.
ಹಿಜಾಬ್ ಗಾಗಿ ಹೋರಾಟ ಮಾಡಿ ಕ್ಲಾಸ್ ಗೆ ಹಾಜರಾಗುತ್ತೆವೆ ಎಂದಿರೋ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರು ಹಿಂದೂ ವಿದ್ಯಾರ್ಥಿಗಳು ಕುಂಕುಮ ತೆಗೆದು ಕ್ಲಾಸ್ ಗೆ ಹೋಗಬೇಕು ಎಂದು ಆಗ್ರಹಿಸಿದ್ದಾರೆ.. ಕುಂಕುಮ ತೆಗೆದು ಕ್ಲಾಸ್ ಗೆ ಹಾಜರಾದರೇ, ನಾವು ಕ್ಲಾಸ್ ಗೆ ಹೋಗುತ್ತೆವೆಂದು ಪಟ್ಟು ಹಿಡಿದಿದ್ದಾರೆ…








