‘ಅಲ್ಲಾಹು ಅಕ್ಬರ್’ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಹರಿದು ಬರುತ್ತಿದೆ ಲಕ್ಷ ಲಕ್ಷ ರೂ.
ಮಂಡ್ಯ : ಹಿಜಬ್ ಕೇಸರಿ ಸಂಘರ್ಷ ರಾಜ್ಯದಲ್ಲಿ ಭುಗಿಲೆದ್ದಿದ್ದು, ಈ ನಡುವೆ ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಹುಡುಗರ ಮುಂದೆ ಒಬ್ಬಳೇ ನಿಂತು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಇತ್ತೀಚೆಗೆ ಜಮಾತ್ ಎ ಹಿಂದ್ ಸಂಘಟನೆ 5 ಲಕ್ಷ ರೂ ಬಹುಮಾನ ನೀಡಿದ್ದಾಗಿ ಸುದ್ದಿ ಹರಿದಾಡಿತ್ತು.. ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧಿತ ಪೋಸ್ಟರ್ ವೈರಲ್ ಆಗಿತ್ತು.. ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯ ಘೋಷಣೆಯ ವಿಡಿಯೋ ಸಹ ವೈರಲ್ ಆಗಿತ್ತು..
Hijab Controvercy : ವಿವಾದವನ್ನ ರಾಜಕೀಯ ಬಳಸಿಕೊಂಡ್ರೆ ದೇಶದ್ರೋಹ : ರವೀಂದ್ರ ಶ್ರೀಕಂಠಯ್ಯ
ಇದೀಗ ಮುಸ್ಕಾನ್ ಖಾನ್ ಗೆ ಹಣದ ಜತೆಗೆ ಐಕಾನ್ ಲೇಡಿ ಬಿರುದು ನೀಡಿ ಸನ್ಮಾನವನ್ನೂ ಮಾಡಲಾಗಿದೆ.. ಜಮಾತ್ ಏ ಹಿಂದ್ ಸಂಘಟನೆಯಿಂದ ಬಹುಮಾನ ಘೋಷಣೆಯಾಗಿದೆ ಎಂದು ಫೋಸ್ಟ್ ಹರಿದಾಡಿದ ಬೆನ್ನಲ್ಲೇ ಬಿಬಿಎಂಪಿ ಸದಸ್ಯ ಇಬ್ರಾನ್ ಪಾಷ ಆಕೆಗೆ 1 ಲಕ್ಷ ರೂ. ಚೆಕ್ ನೀಡಿರೀದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲ ಮುಸ್ಕಾನ್ ನಿವಾಸಕ್ಕೆ ಮುಸ್ಲಿಂ ಮುಖಂಡರ ದಂಡು ಜೊತೆಗೆ ರಾಜ್ಯ , ಹೊರ ರಾಜ್ಯದಿಂದಲೂ ಮುಸ್ಕಾನ್ ಭೇಟಿಗೆ ಮುಖಂಡರು ಆಗಮಿಸುತ್ತಿರೋದು ತಿಳಿದುಬರುತ್ತಿದೆ.








