Politics : ಕೇಸರಿ ಶಾಲು ಹಾಕಿ ವಿಷಬೀಜ ಬಿತ್ತುತ್ತಿದ್ದಾರೆ : ಜಮೀರ್ ಅಹ್ಮದ್ ಖಾನ್
ಹಾವೇರಿ : ಹಿಜಾಬ್ ಕುರಿತಾಗಿ ಮಾಜಿ ಸಚಿವ ಜಮೀರ ಅಹಮ್ಮದ್ ಖಾನ್ ವಿವಾದಾತ್ಮಕ ಹೇಳಿಕೆಗೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ… ಇದೀಗ ಈ ವಿಚಾರವಾಗಿ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಖಾದ್ರಿ ದರ್ಗಾ ಬಳಿ ಮಾತನಾಡಿರುವ ಜಮೀರ್ , ನಮ್ಮಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡಲು ಅವಕಾಶವಿದೆ. ನಮಾಜ್ ಮಾಡಲು ಎಲ್ಲಿ ಅವಕಾಶ ಸಿಗುತ್ತೋ ಅಲ್ಲಿ ನಮಾಜ್ ಮಾಡಬಹುದು. ಮನೆಯಲ್ಲಿ ಅವಕಾಶ ಸಿಕ್ಕರೂ ನಮಾಜ್ ಮಾಡಬಹುದು.
ಹಿಜಾಬ್ ಧರಿಸೋದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಷ್ಟು ದಿನಗಳಿಂದ ಇಲ್ಲದಿರೋದು ಈಗ್ಯಾಕೆ. ಕೇಸರಿ ಶಾಲು ಧರಿಸೋದು ಯಾವಾಗ ಅರಂಭ ಆಗಿದೆ. ಮಕ್ಕಳನ್ನ ರಾಜಕೀಯ ಭವಿಷ್ಯಕ್ಕೆ ಬಳಸಿಕೊಳ್ತಿದ್ದಾರೆ. ಮಕ್ಕಳಲ್ಲಿ ಜಾತಿ ಬೀಜ ಬಿತ್ತುತ್ತಿದ್ದಾರೆ.
ಇದು ಮಕ್ಕಳಿಗೆ ಗೊತ್ತಾಗ್ತಿಲ್ಲ. ಪಾಪ ಇದು ಮಕ್ಕಳಿಗೆ ಏನೂ ಅಂತಾನೆ ಗೊತ್ತಿಲ್ಲ. ಕೇಸರಿ ಶಾಲು ಹಾಕಿ ವಿಷಬೀಜ ಬಿತ್ತುತ್ತಿದ್ದಾರೆ. ಹಿಜಾಬ್ ಹಾಕೋದು ಅವರ ರಕ್ಷಣೆಗೋಸ್ಕರ, ಅವರ ಬ್ಯೂಟಿ ಕಾಪಾಡಿಕೊಳ್ಳೋದಕ್ಕೋಸ್ಕರ ಎಂದಿದ್ದಾರೆ…