Hijab Controvercy : ಜಮಾತ್ ಎ ಹಿಂದ್ ಸಂಘಟನೆ ವಿರುದ್ಧ ಹಿಂದೂ ಸಂಘಟನೆಯಿಂದ ದೂರು..
ಮಂಡ್ಯ : ಹಿಜಬ್ ಕೇಸರಿ ಸಂಘರ್ಷ ರಾಜ್ಯದಲ್ಲಿ ಭುಗಿಲೆದ್ದಿದ್ದು, ಈ ನಡುವೆ ಮಂಡ್ಯ ಪಿಇಎಸ್ ಕಾಲೇಜಿನಲ್ಲಿ ಹುಡುಗರ ಮುಂದೆ ಒಬ್ಬಳೇ ನಿಂತು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಇತ್ತೀಚೆಗೆ ಜಮಾತ್ ಎ ಹಿಂದ್ ಸಂಘಟನೆ 5 ಲಕ್ಷ ರೂ ಬಹುಮಾನ ನೀಡಿದ್ದಾಗಿ ಸುದ್ದಿ ಹರಿದಾಡಿತ್ತು.. ಸೋಷಿಯಲ್ ಮೀಡಿಯಾದಲ್ಲಿ ಈ ಸಂಬಂಧಿತ ಪೋಸ್ಟರ್ ವೈರಲ್ ಆಗಿತ್ತು.. ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯ ಘೋಷಣೆಯ ವಿಡಿಯೋ ಸಹ ವೈರಲ್ ಆಗಿತ್ತು..
ಇದೀಗ ಜಮಾತ್ ಏ ಹಿಂದ್ ಸಂಘಟನೆ ವಿರುದ್ಧ ಎಸ್ಪಿಗೆ ಮಂಡ್ಯ ಎಸ್ಪಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ದೂರು ಸಲ್ಲಿಸಿದ್ದಾರೆ.. ಮುಸ್ಕಾನ್ ಗೆ 5 ಲಕ್ಷ ಬಹುಮಾನ ಘೋಷಣೆ ಪೋಸ್ಟ್ ವೈರಲ್ ಆದ ಹಿನ್ನೆಲೆ ಮಂಡ್ಯ ಎಸ್ಪಿಗೆ ಹಿಂದೂ ಸಂಘಟನೆ ಕಾರ್ಯಕರ್ತರು ದೂರು ನೀಡಿದ್ದಾರೆ.
Hijab Controvercy : ವಿವಾದವನ್ನ ರಾಜಕೀಯ ಬಳಸಿಕೊಂಡ್ರೆ ದೇಶದ್ರೋಹ : ರವೀಂದ್ರ ಶ್ರೀಕಂಠಯ್ಯ
ಬಹುಮಾನ ನೀಡುವ ಮೂಲಕ ಪ್ರಚೋದನೆ ನೀಡಲಾಗುತ್ತಿದೆ ಎಂದು ಆರೋಪ ಮಾಡಿ, ಇದೊಂದು ಕೋಮು ಗಲಭೆ ನಡೆಸುವ ಹುನ್ನಾರ. ಹೀಗಾಗಿ ಜಮಾತ್ ಏ ಹಿಂದ್ ಬಹುಮಾನ ಘೋಷಣೆ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖವಾಗಿದೆ.








