Hijab Controvercy : ಹಿಜಬ್ ಧರಿಸಿ ಬಂದ ಮಕ್ಕಳು ಪರೀಕ್ಷೆ ಬರೆಯದ ವಿಚಾರವಾಗಿ ಸಚಿವ ನಾರಾಯಣ ಗೌಡ ಪ್ರತಿಕ್ರಿಯೆ
ಶಿವಮೊಗ್ಗ : ಹಿಜಬ್ ಧರಿಸಿ ಬಂದ ಮಕ್ಕಳು ಪರೀಕ್ಷೆ ಬರೆಯದ ವಿಚಾರವಾಗಿ ಸಚಿವ ನಾರಾಯಣ ಗೌಡರು ಪ್ರತಿಕ್ರಿಯೆ ನೀಡಿದ್ದಾರೆ… ಶಿವಮೊಗ್ಗದಲ್ಲಿ ಗೊಂದಲ ನಡೆದಿದೆ. ಮಕ್ಕಳು ಎಕ್ಸಾಂ ಬರೆಯೋದಕ್ಕೆ ತೊಂದರೆಯಿಲ್ಲ. ನಾನು ಡಿಸಿ,ಎಸ್ಪಿ ಜೊತೆ ಮಾತನಾಡಿದ್ದೇವೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಹೇಳಿದ್ದಾರೆ..
7 ಜನ ಮಕ್ಕಳು ಪರೀಕ್ಷೆ ಬರೆದಿಲ್ಲ. ಹಿಜಾಬ್ ತೆಗೆದು ಒಳ ಬನ್ನಿ ಎಂದಿದ್ದಾರೆ. ಶಿಕ್ಷಕರು ಹಿಜಬ್ ಕಳಚಿ ಒಳಗೆ ಬರುವಂತೆ ಹೇಳಿದ್ದಾರೆ. ಅವರು ಹಿಜಾಬ್ ತೆಗೆದು ಬಂದಿಲ್ಲ. ನಂತರ ಅವರ ಪೋಷಕರನ್ನ ಕರೆಸಿದ್ದಾರೆ. ಪೋಷಕರ ಜೊತೆಯೇ ಆ ಮಕ್ಕಳುಹೋಗಿದ್ದಾರೆ. ಮೊದಲು ಆ ಮಕ್ಕಳು ಹಿಜಾಬ್ ಹಾಕ್ತಿರಲಿಲ್ಲ. ಆದ್ರೆ ಇವತ್ತು ಹಾಕಿಕೊಂಡು ಬಂದಿದ್ದಾರೆ ಎಂದಿದ್ದಾರೆ…