ಹಿಜಾಬ್ ವಿವಾದ ಒಂದು ಅಂತಾರಾಷ್ಟ್ರೀಯ ಸಂಚು hijab controversy bjp-blames congress saaksha tv
ಬೆಂಗಳೂರು : ಹಿಜಾಬ್ ವಿವಾದ ಒಂದು ಅಂತಾರಾಷ್ಟ್ರೀಯ ಸಂಚು ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಹಿಜಾಬ್ ಕುರಿತಾಗಿ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ, ನೊಬೆಲ್ ಪ್ರಶಸ್ತಿ ಪುರಸ್ಕೃತೆ ಪಾಕಿಸ್ತಾನದ ಮಲಾಲಾ ಯೂಸುಫ್ ಝಾಯಿ ಪ್ರತಿಕ್ರಿಯೆ ನೀಡಿದ್ದರು.
ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ಹಿಜಾಬ್ ವಿವಾದ ಒಂದು ಅಂತಾರಾಷ್ಟ್ರೀಯ ಸಂಚು.
ಭಾರತದ ಘನತೆಯನ್ನು ಕುಗ್ಗಿಸುವ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದಲ್ಲಿ ಹಿಜಾಬ್ ವಿವಾದ ವ್ಯಾಪಿಸುತ್ತಿದೆ.
ಈ ಅಭಿಯಾನಕ್ಕೆ ಅಂತರಾಷ್ಟ್ರೀಯ ಮಟ್ಟದ ಶಕ್ತಿಗಳು ಕೈ ಮಿಲಾಯಿಸುತ್ತಿವೆ ಎಂದು ದೂರಿದೆ.
ಜೊತೆಗೆ ಪ್ರಿಯಾಂಕಾ ಗಾಂಧಿ ಅವರ, ಟ್ವೀಟ್ ಗೆ ಆಕ್ರೋಶ ಹೊರಹಾಕಿದ್ದು, ಹಿಜಾಬ್ ಸಂಚಿನ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂಬುದಕ್ಕೆ ಈಗ ಮತ್ತೊಂದು ಸಾಕ್ಷಾ ಲಭಿಸಿದೆ.
ಹಿಜಾಬ್ ಜೊತೆಗೆ ತುಂಡುಡುಗೆಯ ಪರ ಪ್ರಿಯಾಂಕಾ ಗಾಂಧಿ ವಾದ ಮಂಡಿಸಿದ್ದಾರೆ. ಆದರೆ ಈಗ ಇರುವುದು ನಮ್ಮ ಧಿರಿಸಿನ ಪ್ರಶ್ನೆಯಲ್ಲ, ಶಾಲೆಯಲ್ಲಿ ಸಮವಸ್ತ್ರ ಧರಿಸುವ ಪ್ರಶ್ನೆ ಮಾತ್ರ ಎಂದಿದೆ.









