ಮಧ್ಯಪ್ರದೇಶ, ಪುದುಚೇರಿಗು ಹಬ್ಬಿದ ಹಿಜಾಬ್ ವಿವಾದ Saaksha Tv
ಮಧ್ಯಪ್ರದೇಶ, ಪುದುಚೇರಿ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಇದೀಗ ರಾಜ್ಯದ ಗಡಿ ದಾಟಿ, ಮಧ್ಯಪ್ರದೇಶ ಮತ್ತು ಪುದುಚೇರಿಯಲ್ಲೂ ವಿವಾದ ಕಾಣಿಸಿಕೊಂಡಿದೆ.
ಪುದುಚೇರಿಯ ಅರಿಯಾಂಕುಪ್ಪಂನ ಸರ್ಕಾರಿ ಶಾಲೆಯಗೆ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್ ಧರಿಸಿಕೊಂಡು ಬಂದಿದ್ದಾರೆ. ಆಗ ಶಾಲೆಯ ಶಿಕ್ಷಕರೊಬ್ಬರು ವಿದ್ಯರ್ಥಿನಿಯರನ್ನು ತಡೆದು ಪ್ರಶ್ನಿಸಿದ್ದಾರೆ. ಈಗ ಈ ಕುರಿತು ಪ್ರಶ್ನಿಸಿದ ಶಿಕ್ಷಕ ಹಾಗೂ ಘಟನೆ ಕುರಿತಾಗಿ ತನಿಖೆ ನಡೆಸುವುದಾಗಿ ಅರಿಯಕುಪ್ಪಂ ಶಾಲಾ ಮುಖ್ಯಸ್ಥರು ತಿಳಿಸಿದ್ದಾರೆ.
ಹಾಗೇ ಮಧ್ಯಪ್ರದೇಶದ ಪ್ರೌಢಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಹಿಜಾಬ್ ಮೇಲಿನ ನಿರ್ಬಂಧವನ್ನು ಬೆಂಬಲಿಸಿದ್ದು, ಸರ್ಕಾರವು ಶಾಲೆಗಳಲ್ಲಿ ಶಿಸ್ತು ಪಾಲನೆಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದಾರೆ.
ಅಲ್ಲದೇ ಹಿಜಾಬ್ ಎಂಬುದು ಸಮವಸ್ತ್ರದ ಭಾಗವಲ್ಲ, ಶಾಲೆಗಳಲ್ಲಿ ಅದನ್ನು ಕಡ್ಡಾಯವಾಗಿ ರದ್ದುಗೊಳಿಸಬೇಕು. ಜನರು ಸಂಪ್ರದಾಯವನ್ನು ತಮ್ಮ ಮನೆಯಲ್ಲಿ ಅನುಸರಿಸಬೇಕು, ಶಾಲೆಗಳಲ್ಲಿ
ಅಲ್ಲ. ಶಾಲೆಗಳಲ್ಲಿ ಸಮವಸ್ತ್ರವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ನಿಷೇಧಿಸಲಾಗುತ್ತದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಪರಿಶೀಲಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು. ಇನ್ನು ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಮಧ್ಯಪ್ರದೇಶವು ಸುಮಾರು 1.25 ಲಕ್ಷ ಸರ್ಕಾರಿ ಶಾಲೆಗಳನ್ನು ಹೊಂದಿದೆ, ಒಂದರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಸಮವಸ್ತ್ರಕ್ಕೆ ರಾಜ್ಯ ಸರ್ಕಾರವೇ ಹಣ ನೀಡುತ್ತಿದೆ.









